ಐದು ವರ್ಷದ ಮಗು ಎಚ್ಚರ ಇದ್ದಾಗಲೇ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ.
ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಐದು ವರ್ಷದ ಬಾಲಕಿಯ ಮೆದುಳಿನ ಗೆಡ್ಡೆ ತೆಗೆಯಲು ಅವೇಕ್ ಕ್ರ್ಯಾನಿಯೋಟೊಮಿ ಎಂಬ ಶಸ್ತ್ರಚಿಕಿತ್ಸೆಯನ್ನು ವೈದ್ಯರು ಮಾಡಿದ್ದರು. ಇದು ನರ ಶಸ್ತ್ರಚಿಕಿತ್ಸೆಯಲ್ಲಿಯೇ ಅತ್ಯಾಧುನಿಕ ತಂತ್ರವಾಗಿದ್ದು, ಈ ವಿಧಾನವು ಮೆದುಳಿನ ಹಾನಿ ತಪ್ಪಿಸಲು ರೋಗಿಯು ಎಚ್ಚರವಾಗಿರುವಾಗ ಮೆದುಳಿನ ಗೆಡ್ಡೆ ತೆಗೆಯಲು ಶಸ್ತ್ರಚಿಕಿತ್ಸಕರಿಗೆ ಅನುವು ಮಾಡಿಕೊಡುತ್ತದೆ. ಈ ಚಿಕಿತ್ಸೆಯನ್ನು ಮೊದಲ ಬಾರಿಗೆ ಅತ್ಯಂತ ಚಿಕ್ಕ ವಯಸ್ಸಿನ ಬಾಲಕಿಗೆ ನಡೆಸಿರುವುದು ಇದೇ ಮೊದಲಾಗಿದ್ದು, ಇದರಲ್ಲಿ ಏಮ್ಸ್ ವೈದ್ಯರು ಯಶಸ್ವಿಯಾಗಿದ್ದಾರೆ.
ಬಾಲಕಿ ಚಿಕಿತ್ಸೆ ನಂತರವೂ ಬಾಲಕಿ ಆರೋಗ್ಯವಾಗಿದ್ದಾಳೆ ಎನ್ನಲಾಗಿದೆ.








