ಬೆಂಗಳೂರು: ದುಷ್ಕರ್ಮಿಗಳು ವ್ಯಕ್ತಿಯೊಬ್ಬರನ್ನು ಅಟ್ಟಾಡಿಸಿಕೊಂಡು ಹೋಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ರಾಜ್ಯದ ಗಡಿಭಾಗದ ತಮಿಳುನಾಡಿನ (Tamil Nadu) ಸಿಪ್ಕಾಟ್ ಹತ್ತಿರದ ಬೇಗಿಪಲ್ಲಿಯಲ್ಲಿ ನಡೆದಿದ್ದು, ಬೇಗಿಪಲ್ಲಿಯ ನಿವಾಸಿ ತಿಮ್ಮರಾಜು (36) ಕೊಲೆಯಾಗಿರುವ ದುರ್ದೈವಿ ಎನ್ನಲಾಗಿದೆ. ಮೂವರು ದುಷ್ಕರ್ಮಿಗಳೇ ಅಟ್ಟಾಡಿಸಿಕೊಂಡು ಹೋಗಿ ಕೊಲೆ ಮಾಡಿದ್ದಾರೆ.
ದುಷ್ಕರ್ಮಿಗಳು ಬರೋಬ್ಬರಿ 25 ಬಾರಿ ಚುಚ್ಚಿದ್ದಾರೆ. ಹೀಗಾಗಿ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಆದರೆ, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹತ್ಯೆಯಾದ ನಂತರ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿ, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.








