ಚಿಕ್ಕಬಳ್ಳಾಪುರ: ಅಯೋಧ್ಯೆ ರಾಮನ ಜೀವನ ಗಾಥೆ ಇದುವರೆಗೂ ಜನಮಾನಸದಲ್ಲಿ ಉಳಿಯುವಂತೆ ಮಾಡಿರುವುದು ವಾಲ್ಮೀಕಿ ಮಹರ್ಷಿ. ಆದರೆ, ಅವರು ಹುಟ್ಟಿದ್ದು ನಮ್ಮ ಕರ್ನಾಟಕದಲ್ಲಿ ಎನ್ನುವುದು ಇನ್ನೂ ವಿಶೇಷ.
ಸದ್ಯ ಅಯೋಧ್ಯೆಯ ರಾಮನ ಮೂರ್ತಿ ಪ್ರತಿಷ್ಠಾಪನೆಯ ಜೊತೆಗೆ ವಾಲ್ಮೀಕಿ ಮಹರ್ಷಿ (Valmiki Maharshi) ಪ್ರತಿಮೆಯೂ ಅನಾವರಣ ಮಾಡಲಾಗುತ್ತಿದೆ. ಈ ನಡುವೆ, ವಾಲ್ಮೀಕಿ ಹುಟ್ಟಿ ಬೆಳೆದು, ಬಾಲ್ಯ, ಯೌವನ ಹಾಗೂ ವೃತ್ತಿ ಸೇರಿದಂತೆ ಮೋಕ್ಷ ಪಡೆದ ಸ್ಥಳ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಎನ್ನಲಾಗಿದೆ.
ತಲಕಾಯಲಬೆಟ್ಟ ಗ್ರಾಮದ ಹತ್ತಿರ ಕೆಟ್ಟ ಕೆಲಸಗಳನ್ನು ಬಿಟ್ಟು ಇಲ್ಲಿರುವ ಗುಹೆಯಲ್ಲಿ ಜಪ ತಪ ಜ್ಞಾನ ಸಂಪಾದಿಸಿದರಂತೆ. ಇದರ ಕುರುಹುಗಾಗಿ ಬೆಟ್ಟದಲ್ಲಿ ಗುಹೆ, ಶಿವಲಿಂಗ ಇದ್ದು, ಹೊರಗೆ ವಾಲ್ಮೀಕಿ ಮಹರ್ಷಿಯ ದೇವಸ್ಥಾನದ ಪ್ರತಿಮೆ ಇದೆ. ಅಯೋದ್ಯೆಯಲ್ಲಿ ಸ್ಥಾನ ಕೊಟ್ಟಿರುವುದಕ್ಕೆ ತಲಕಾಯಲಬೆಟ್ಟ ಗ್ರಾಮಸ್ಥರ ಸಂತೋಷಕ್ಕೆ ಕಾರಣವಾಗಿದೆ.








