ಬೆಂಗಳೂರು : ಅಯ್ಯಪ್ಪನ ಮಾಲೆ ಧರಿಸಿದ ನಂತರ, ದರ್ಶನ ಪಡೆದು, ನೇರವಾಗಿ ಪ್ರಿಯತಮೆ ನೋಡಲು ಬಂದು, ಈಗ ಜೈಲು ಪಾಲಾಗಿರುವ ಘಟನೆಯೊಂದು ನಡೆದಿದೆ.
ನೇರವಾಗಿ ಮನೆಗೆ ಬಂದಿದ್ದ ಪ್ರಿಯಕರನೊಂದಿಗೆ ಸರಸವಾಡಲು ಅಡ್ಡಿಯಾಗಿದ್ದಾನೆ ಎಂಬ ಕಾರಣಕ್ಕೆ ಪತ್ನಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿದ್ದಾಳೆ. ಪತಿ ವೆಂಕಟನಾಯ್ಕ್ ತಲೆ ಮೇಲೆ ಕಲ್ಲು ಎತ್ತಿಹಾಕಿ ಪತ್ನಿ ಕೊಲೆ ಮಾಡಿಸಿದ್ದಾಳೆ ಎನ್ನಲಾಗಿದ್ದು, ನಂತರ ಅವಳೇ ತ್ ರೂಂನಲ್ಲಿ ನನ್ನ ಗಂಡ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಹೈಡ್ರಾಮಾ ನಡೆಸಿದ್ದಾಳೆ.
ಹೆಚ್ಎಸ್ಆರ್ ಲೇಔಟ್ನ (HSR Layout) ನಿವಾಸಿ ನಂದಿನಿ ಬಾಯಿ ಎಂಬುವವಳೇ ಆರೋಪಿಯಾಗಿದ್ದು, ಜ. 9ರಂದು ಶಬರಿ ಮಲೆಯಿಂದ ಬಂದಿದ್ದ ಪ್ರಿಯಕರನನ್ನು ತನ್ನ ಮನೆಗೆ ಕರೆಸಿಕೊಂಡಿದ್ದಾಳೆ. ಪತಿ ಇಲ್ಲ ಎಂದು ಸರಸ ಸಲ್ಲಾಪದಲ್ಲಿ ತೊಡಗಿದ್ದಾಳೆ. ಆದರೆ, ಆ ಸಮಯಕ್ಕೆ ಪತಿ ಆಗಮಿಸಿದ್ದು, ಕಂಗಾಲಾದ ನಂದಿನಿ ಪ್ರೀಯಕರನೊಂದಿಗೆ ಸೇರಿ ಕೊಲೆ ಮಾಡಿಸಿದ್ದಾಳೆ. ನಂತರ ತಪ್ಪಿಸಿಕೊಳ್ಳುವುದಕ್ಕಾಗಿ ಬಾತ್ ರೂಂನಿಂದ ಬಿದ್ದು ಸಾವನ್ನಪ್ಪಿದ್ದಾನೆ ಎಂದು ನಾಟಕವಾಡಿದ್ದಾಳೆ.
ಆದರೆ, ಮರಣೋತ್ತರದಲ್ಲಿ ಇದು ಸಹಜ ಸಾವಲ್ಲ. ಕೊಲೆ ಎಂಬ ಅನುಮಾನ ವ್ಯಕ್ತವಾಗಿದೆ. ಆಗ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬಾಯಿ ಬಿಟ್ಟಿದ್ದಾಳೆ. ಸದ್ಯ ಆರೋಪಿ ನಿತೀಶ್ ಕುಮಾರ್ ನನ್ನು ಪೊಲೀಸರು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.








