ವಿಜಯಪುರ: ಯುವಕನೊಬ್ಬ ತಲ್ವಾರ್ ನಿಂದ ಕೇಕ್ ಕತ್ತಿರಿಸಿರುವ ಘಟನೆಯೊಂದು ನಡೆದಿದೆ.
ಈ ಘಟನೆ ವಿಜಯಪುರ ನಗರದ ಪೇಟಿ ಬಾವಡಿಯಲ್ಲಿ ನಡೆದಿದೆ. ಅಮನ್ ಲೋಣಿ ತಲ್ವಾರ್ನಿಂದ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡ ಯುವಕ ಎನ್ನಲಾಗಿದೆ. ಅಲ್ಲದೇ, ಈ ಯುವಕನಿಗೆ ರೌಡಿ ಶೀಟರ್ ಮಹ್ಮದ್ ಸಾಜೀದ್ ಇನಾಮದಾರ್ ಸಾಥ್ ನೀಡಿದ್ದಾನೆ.
ಇದು ಭಾರೀ ಚರ್ಚೆಗೆ ಕಾರಣವಾಗಿದ್ದು, ಅಮನ್ ಲೋಣಿ ಹಾಗೂ ರೌಡಿ ಶೀಟರ್ನ್ನು ಠಾಣೆಗೆ ಕರೆಸಿದ ಗೋಲಗುಂಬಜ್ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅಲ್ಲದೇ, ಇಬ್ಬರ ಬಳಿ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡಿದ್ದಾರೆ ಎನ್ನಲಾಗಿದೆ.








