ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಯ್ಕೆ ಮಾಡುವ ಪ್ರಕ್ರಿಯೆ ಶುರುವಾಗಿದ್ದು, ಮೊದಲ ಹಂತದಲ್ಲಿ ಡೊನಾಲ್ಡ್ ಟ್ರಂಪ್(Donald Trump) ಮುಂದಿದ್ದಾರೆ.
ರಿಪಬ್ಲಿಕನ್ ಪಕ್ಷದ ಪರವಾಗಿ ಡೊನಾಲ್ಡ್ ಟ್ರಂಪ್ ಸ್ಪರ್ಧಿಸಲಿದ್ದಾರೆ. 2024ರ ಚುನಾವಣೆಯಲ್ಲಿ ನಾನು ಚುನಾವಣೆಯಲ್ಲಿ ಗೆಲ್ಲದಿದ್ದರೆ ದೇಶದಲ್ಲಿ ದೊಡ್ಡ ಆರ್ಥಿಕ ಬಿಕ್ಕಟ್ಟು ಎದುರಾಗಲಿದೆ. ಕಾನೂನು ಸವಾಲುಗಳನ್ನು ಎದುರಿಸುತ್ತಿದ್ದರೂ, ಮಧ್ಯಪಶ್ಚಿಮ ರಾಜ್ಯದಲ್ಲಿ ಟ್ರಂಪ್ ಗಣನೀಯ ಬೆಂಬಲ ಹೊಂದಿದ್ದಾರೆ.
ಎಂಟು ತಿಂಗಳ ಅವಧಿಯ ಅಧ್ಯಕ್ಷೀಯ ಪ್ರಾಥಮಿಕ ಪ್ರಕ್ರಿಯೆಗಳ ಆರಂಭಿಕ ಸ್ಪರ್ಧೆ ಇದಾಗಿದ್ದು, ಈ ಮತದಾನದಲ್ಲಿ ಪಾಲ್ಗೊಳ್ಳುವವರು ಈ ಭಾಗದ 750ಕ್ಕೂ ಹೆಚ್ಚು ಶಾಲೆ, ಚರ್ಚ್ ಹಾಗೂ ಸಮುದಾಯಗಳು ಸೇರಿ ಚರ್ಚೆಯನ್ನು ನಡೆಸುತ್ತಾರೆ. ಸದ್ಯ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ರೇಸ್ನಲ್ಲಿ ಡೊನಾಲ್ಡ್ ಟ್ರಂಪ್ ಮುಂಚೂಣಿಯಲ್ಲಿದ್ದಾರೆ. ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಾರಿ ಗೆಲುವು ಸಾಧಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಈಗಾಗಲೇ ಶ. 34ರಷ್ಟು ಮತ ಎಣಿಕೆ ನಡೆದಿದ್ದು, ಟ್ರಂಪ್ ಶೇ. 51.9 ರಷ್ಟು ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ. ಡಿಸಾಂಟಿಸ್ ಶೇ. 20.7 ರೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಹ್ಯಾಲಿ ಶೇ. 19 ರಷ್ಟು ಮತ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. ವಿವೇಕ್ ರಾಮಸ್ವಾಮಿ ಕೇವಲ ಶೇ. 7.7 ರಷ್ಟು ಮತಗಳನ್ನು ಗಳಿಸಿದ್ದಾರೆ.








