ಬಾಲಕೋಟೆ: ತಾಯಿಯನ್ನು ಕಳೆದುಕೊಂಡಿರುವ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಮುರುಗೇಶ್ ನಿರಾಣಿ (Murugesh Nirani) ಅವರಿಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಪತ್ರ ಬರೆದು ಸಾಂತ್ವನ ಹೇಳಿದ್ದಾರೆ.
ತಾಯಿ ಸುಶಿಲಾತಾಯಿ ಅವರು ವಿಧಿವಶರಾದ ಸುದ್ದಿ ದುಃಖ ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಕುಟುಂಬಕ್ಕೆ ಅಗಲಿಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮೋದಿ ಸಾಂತ್ವನ ಹೇಳಿದ್ದಾರೆ.
ತಾಯಿ ಹೃದಯಕ್ಕೆ ಈ ಜಗತ್ತಿನಲ್ಲಿ ಯಾವುದನ್ನು ಹೋಲಿಸುವುದಕ್ಕೂ ಸಾಧ್ಯವಿಲ್ಲ. ತಾಯಿ ಎಂದೂ ಮರಳಿ ಸಿಗದ ಕೊಡುಗೆ ಇದ್ದ ಹಾಗೆ. ತಾಯಿ ಸದಾ ನೆರಳು ನೀಡುವ ಮರದಂತೆ. ಅವರು ಕುಟುಂಬದ ಜೊತೆ ತಮ್ಮ ನೆನಪನ್ನು ಬಿಟ್ಟು ಹೋಗಿದ್ದಾರೆ. ಅವರು ಅಜರಾಮರ ಎಂದು ಮೋದಿ ಪತ್ರದ ಮೂಲಕ ಸಾಂತ್ವನ ಹೇಳಿದ್ದಾರೆ. ಇತ್ತೀಚೆಗಷ್ಟೇ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ತಾಯಿ ಸುಶಿಲಾಬಾಯಿ(78) ಇಹಲೋಕ ತ್ಯಜಿಸಿದ್ದರು.








