ಮಾಸ್ಕೋ: 65 ಜನ ಉಕ್ರೇನ್ (Ukraine) ಯುದ್ಧ ಕೈದಿಗಳನ್ನು ಹೊತ್ತು ಸಾಗುತ್ತಿದ್ದ ರಷ್ಯಾದ ಮಿಲಿಟರಿ ವಿಮಾನ ಪತನವಾಗಿದ್ದು, ಎಲ್ಲರೂ ಸಾವನ್ನಪ್ಪಿರುವ ಘಟನೆ ನಡೆದಿದೆ.
ಪಘಾತದ ವೀಡಿಯೋ ವೈರಲ್ ಆಗಿದ್ದು, ವಿಮಾನವು ವೇಗವಾಗಿ ಭೂಮಿಯ ಕಡೆ ಬರುತ್ತಿರುವ ದೃಶ್ಯ ವೀಡಿಯೋದಲ್ಲಿದೆ. IL-76 ವಿಮಾನವು (Russian Plane Crash) ಪೈಲಟ್ ನಿಯಂತ್ರಣ ಕಳೆದುಕೊಂಡಿತ್ತು. ಈ ವೇಳೆ ಬೆಲ್ಗೊರೊಡ್ ಪ್ರದೇಶದಲ್ಲಿ ಅಪಘಾತವಾಗಿದೆ ಎಂದು ಮಾಸ್ಕೋದ ರಕ್ಷಣಾ ಸಚಿವಾಲಯ ಹೇಳಿದೆ ಎನ್ನಲಾಗಿದೆ.
ಹಡಗಿನಲ್ಲಿ ವಶಕ್ಕೆ ಪಡೆದ 65 ಉಕ್ರೇನಿಯನ್ ಸೇನಾ ಯೋಧರನ್ನು ವಿನಿಮಯಕ್ಕಾಗಿ ಬೆಲ್ಗೊರೊಡ್ ಪ್ರದೇಶಕ್ಕೆ ಸಾಗಿಸಲಾಗಿತ್ತು. 6 ಜನ ಸಿಬ್ಬಂದಿ ಹಾಗೂ ಮೂವರು ಬೆಂಗಾವಲುಗಳಿದ್ದರು ಎನ್ನಲಾಗಿದೆ.








