ನವದೆಹಲಿ :ಒಂದೆಡೆ ಕೊರೊನಾ ಸಂಕಷ್ಟದ ನಡುವಿಯು ಎಸ್.ಎಸ್.ಎಲ್.ಸಿ ಪರೀಕ್ಷೆ ಪ್ರಾರಂಭವಾಗಿ ಒಂದು ದಿನ ಕಳೆಯಿತು. ಇಂತಹ ಸಂದರ್ಭದಲ್ಲಿ ಜುಲೈ 1 ರಿಂದ 15 ರವರೆಗೂ ನಡೆಯಬೇಕಿದ್ದ ಸಿ.ಬಿ.ಎಸ್.ಇ ಯ ಎಸ್.ಎಸ್.ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಿದೆ.
ಅಲ್ಲದೆ ಎಸ್.ಎಸ್.ಎಲ್ ಸಿ ಮತ್ತು ಪಿಯುಸಿ ತರಗತಿಗಳಲ್ಲಿ ವಾರ್ಷಿಕ ಪರೀಕ್ಷೆಗೂ ಮುನ್ನ ಮೂರು ಹಂತದ ಪರೀಕ್ಷೆ ಮಾಡಲಾಗಿರುತ್ತದೆ. ಆ ಮೂರು ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಪಾಸ್ ಮಾಡಲಾಗುತ್ತದೆ ಎಂದು ಸಿಬಿಎಸ್ಇ ಹೇಳಿದೆ.
ದೇಶದಲ್ಲಿ ಕೊರೊನಾ ದಿನ ದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳು ಭಯಗೊಂಡಿದ್ದರು. ಆ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ರದ್ದು ಮಾಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಾಗುತ್ತಿದೆ.
ಇನ್ನೂ ಪರೀಕ್ಷೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮೊರೆ ಹೋಗಲಾಗಿತ್ತು. ಸಾಲಿಸಿಟರ್ ಜನರಲ್ ಗೆ ಪರೀಕ್ಷೆ ರದ್ದು ಮಾಡುವ ಮಾಹಿತಿಯನ್ನು ಪರೀಕ್ಷಾ ಮಂಡಳಿ ತಿಳಿಸಿದೆ