ಡೆಹ್ರಾಡೂನ್: ಅಯೋಧ್ಯೆಯಲ್ಲಿ ರಾಮಮಂದಿರ ಸ್ಥಾಪನೆಯಾಗಿದ್ದು, ಈಗ ಉತ್ತರಾಖಂಡದಲ್ಲಿ ಮದರಸಾಗಳಲ್ಲಿ ರಾಮ ದೇವರ ಕುರಿತ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.
ಮದರಸಾಗಳಲ್ಲಿ (Uttarakhand Madrasa) ಶ್ರೀರಾಮನ (Lord Ram) ಕುರಿತು ಅಧ್ಯಯನ ನಡೆಸಬೇಕೆಂಬ ನಿಟ್ಟಿನಲ್ಲಿ ಹೊಸ ಪಠ್ಯ ಅಳವಡಿಸಿಕೊಳ್ಳಲಾಗುತ್ತಿದ್ದು, ಮುಸ್ಲಿಂ ವಿದ್ಯಾರ್ಥಿಗಳು ಕೂಡ ರಾಮನ ಕುರಿತು ಅಧ್ಯಯನ ನಡೆಸಲಿದ್ದಾರೆ.
ಈ ಕುರಿತು ಉತ್ತರಾಖಂಡ ವಕ್ಫ್ ಬೋರ್ಡ್ ಚೇರ್ಮನ್ ಶಾದಾಬ್ ಶಾಮ್ಸ್ ಮಾಹಿತಿ ನೀಡಿದ್ದು, “ಮದ್ರಸಾ ಆಧುನೀಕರಣ ಯೋಜನೆಯ ಭಾಗವಾಗಿ ಇನ್ನು ಮುಂದೆ ಉತ್ತರಾಖಂಡದ ಮದರಸಾಗಳಲ್ಲಿಯೂ ಶ್ರೀರಾಮನ ಕುರಿತ ಪಠ್ಯಗಳನ್ನು ಅಳವಡಿಸಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಹೀಗಾಗಿ ಇನ್ನು ಮುಂದೆ ಮುಸ್ಲಿಂ ವಿದ್ಯಾರ್ಥಿಗಳು ಪ್ರವಾದಿ ಮೊಹಮ್ಮದರೊಂದಿಗೆ ರಾಮನ ಕುರಿತು ಕೂಡ ಅಧ್ಯಯನ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.