ತುಮಕೂರು: ಮೂವರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ತಾಯಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಕುಣಿಗಲ್ (Kunigal) ತಾಲೂಕಿನ ಹೊಸೂರು ಗ್ರಾಮದ ಮಹಿಳೆಯೇ ಇತ್ತೀಚೆಗೆ ನಾಪತ್ತೆಯಾಗಿದ್ದು, ಈಗ ಕೋಲಾರ (Kolar) ಜಿಲ್ಲೆಯ, ಶ್ರೀನಿವಾಸಪುರದಲ್ಲಿ ಪತ್ತೆಯಾಗಿದ್ದಾರೆ. ವಸಂತಕುಮಾರಿ ವೈ.ಎಸ್ (25), ತನುಶ್ರೀ (8) ಎರಡನೇ ಮಗಳು ಭೂಮಿಕಾ (6) ಮೂರನೇ ಮಗಳು ಯೋಗಿತಾ (4) ನಾಪತ್ತೆಯಾಗಿದ್ದರು. ಸೊಸೆ ನಾಪತ್ತೆಯಾಗುತ್ತಿದ್ದಂತೆ ಅತ್ತೆ ಕುಣಿಗಲ್ ಪೊಲೀಸ್ (Police) ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಶೋಧ ಕಾರ್ಯ ನಡೆಸಿದ್ದ ಪೊಲೀಸರಿಗೆ ತಾಯಿ ಮತ್ತು ಮಕ್ಕಳು ಶ್ರೀನಿವಾಸಪುರದಲ್ಲಿ ಪತ್ತೆಯಾಗಿದ್ದಾರೆ. ವಸಂತಕುಮಾರಿ ಅವರ ಪತಿ ಸಾವನ್ನಪ್ಪಿ ಕೆಲವು ವರ್ಷಗಳೇ ಕಳೆದಿವೆ. ಗಂಡನ ಮನೆಯವರದ್ದು 8 ಎಕರೆ ಜಮೀನು ಇದ್ದು, ಸ್ಥಿತಿವಂತರಾಗಿದ್ದಾರೆ. ವಸಂತಕುಮಾರಿ ಹೊಸೂರಿನಲ್ಲಿ ಹೊಸ ಮನೆ ಕಟ್ಟಿಸುತ್ತಿದ್ದರು. ಮನೆಯ ಗಾರೆ ಕೆಲಸಕ್ಕೆ ಬಳ್ಳಾರಿ ಮೂಲದ ಸಿದ್ದೇಶ್ ಆಗಮಿಸಿದ್ದರು. ಈ ಮಧ್ಯೆ ಇಬ್ಬರ ಮಧ್ಯೆ ಪ್ರೀತಿ ಬೆಳೆದಿದೆ. ನಂತರ ಸಿದ್ದೇಶ ಜೊತೆ ಜ. 18ರಂದು ವಸಂತಕುಮಾರಿ ಪರಾರಿಯಾಗಿದ್ದರು. ಆದರೂ ವಸಂತಕುಮಾರಿ ಪ್ರಿಯಕರನೊಂದಿಗೆ ಹೋಗಿದ್ದಾಳೆ ಎನ್ನಲಾಗಿದೆ.