ಭೀಕರ ಅಪಘಾತವೊಂದು ನಡೆದಿದ್ದು, ಬೈಕ್ ಸವಾರನನ್ನು ಕಾರು 3 ಕಿ.ಮೀ ಎಳೆದೊಯ್ದ ಘಟನೆಯೊಂದು ನಡೆದಿದೆ.
ಈ ಘಟನೆ ಭಯಾನಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬೈಕ್ ನಲ್ಲಿ ಪತಿ, ಪತ್ನಿ ಹಾಗೂ ಮಗು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದೆ. ಅಲ್ಲದೇ, ವ್ಯಕ್ತಿಯನ್ನು 3 ಕಿ.ಮೀನಷ್ಟು ಎಳೆದೊಯ್ದ ಪರಿಣಾಮ ಆ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಪತ್ನಿ ಹಾಗೂ ಮಗು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವೀರೇಂದ್ರ ಕುಮಾರ್ ಎಂಬುವವರು ತಮ್ಮ ಪತ್ನಿ ಹಾಗೂ 5 ವರ್ಷದ ಮಗುವಿನೊಂದಿಗೆ ರಾಯ್ ಬರೇಲಿಯಿಂದ ದಾಲ್ಮೌ ಪಟ್ಟಣಕ್ಕೆ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಪತ್ನಿ ಮತ್ತು ಮಗ ಬೈಕ್ನಿಂದ ಹಾರಿ ಬಿದ್ದಿದ್ದಾರೆ. ಆದರೆ ವ್ಯಕ್ತಿ ಬೈಕ್ನಲ್ಲೇ ಸಿಲುಕಿಕೊಂಡಿದ್ದರು. ವೀರೇಂದ್ರ ಬಲ ಫೆಂಡರ್ ಮತ್ತು ಚಕ್ರದ ನಡುವೆ ಸಿಲುಕಿಕೊಂಡಿದ್ದರು. ಆದರೆ, ಚಾಲಕ ಕಾರು ನಿಲ್ಲಿಸದೆ ವೇಗವಾಗಿ ಹೋಗಿದ್ದಾನೆ. ಸ್ಥಳೀಯರು ಆರೋಪಿತ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.








