ರಾಂಚಿ: ಜಾರ್ಖಂಡ್ ನ ನೂತನ ಸಿಎಂ ಚಂಪೈ ಸೂರೇನ್ ವಿಸ್ವಾಸ ಮತ ಗೆದ್ದಿದ್ದಾರೆ.
81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಗೆ 47 ಶಾಸಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾ ದಳ ಮೈತ್ರಿ ಒಟ್ಟಾಗಿ ಸಾಗುವ ವಿಶ್ವಾಸವನ್ನು ಈ ಹಿಂದೆಯೇ ವ್ಯಕ್ತಪಡಿಸಿತ್ತು. ಈಗ ಅದನ್ನು ಪಕ್ಕಾ ಆಗಿದೆ. ಚಂಪೈ ಸೊರೇನ್ ಸರ್ಕಾರದ ವಿರುದ್ಧ 29 ಮತಗಳು ಚಲಾವಣೆಯಾದವು.
ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜ.31 ರಂದು ಜಾರಿ ನಿರ್ದೇಶನಾಲಯದಿಂದ ಅವರನ್ನು ಬಂಧಿಸಲಾಯಿತು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಂದ್ರೀಯ ಸಂಸ್ಥೆಯಿಂದ ತನಿಖೆ ನಡೆಸಲಾಗುತ್ತಿದೆ. ಆದರೆ, ಇದು ಬಿಜೆಪಿಯ ಪಿತೂರಿ ಎಂದು ಆರೋಪಿಸಿರುವ ನಾಯಕ, ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಈಗ ಆಡಳಿತಾರೂಢ ಜೆಎಂಎಂ-ಕಾಂಗ್ರೆಸ್ ಸಮ್ಮಿಶ್ರವು ಹೇಮಂತ್ ಸೊರೆನ್ ಅವರ ಉತ್ತರಾಧಿಕಾರಿಯಾಗಿ ಚಂಪೈ ಸೊರೇನ್ ರನ್ನು ಬೆಂಬಲಿಸಿದೆ.