ಬೆಂಗಳೂರು: ಮಹಾಮಾರಿ ಕೊರೊನಾ ಬೆಂಗಳೂರು ನಗರ ಪೊಲೀಸರನ್ನು ಬೆಂಬಿಡದೆ ಕಾಡುತ್ತಿದೆ. ಇಂದು ಏಳು ಮಂದಿಗೆ ಪೊಲೀಸರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ನಗರದಲ್ಲಿ 120ಕ್ಕೂ ಹೆಚ್ಚು ಮಂದಿಗೆ ಕೊರೊನಾ ಅಟ್ಯಾಕ್ ಮಾಡಿದೆ.
ಐಜಿಇ ಕಚೇರಿಯ ಗನ್‌ಮ್ಯಾಗೆ ಕೊರೊನಾ ಪಾಸಿಟಿವ್ ಬಂದಿದೆ. ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳಾ ಸಬ್ ಇನ್ಸ್ಪೆಕ್ಟರ್, ಓರ್ವ ಹೆಡ್ ಕಾನ್ಸ್ಟೇಬಲ್ ಸೇರಿದಂತೆ ಇಬ್ಬರು ಪೊಲೀಸರಿಗೆ ಪಾಸಿಟಿವ್ ಬಂದಿದೆ. ಜತೆಗೆ ಚಾಮರಾಜಪೇಟೆಯ ಓರ್ವ ಪೊಲೀಸರಿಗೂ ಕೋವಿಡ್-19 ಧೃಡಪಟ್ಟಿದೆ.
ಕೆ.ಆರ್ ಮಾರ್ಕೆಟ್ ಠಾಣೆಯಲ್ಲಿ ಇದುವರೆಗೂ 10 ಮಂದಿ ಪೊಲೀಸರಿಗೆ ಪಾಸಿಟಿವ್ ಬಂದಿದೆ. ಹಾಗೆಯೇ 22 ಪೊಲೀಸರ ರಿಪೋರ್ಟ್ ಇನ್ನೇನು ಬರಬೇಕಾಗಿದೆ. ಇತ್ತೀಚೆಗೆ ಪರೀಕ್ಷೆ ಮಾಡಿಸುತ್ತಿರುವ ಬಹುತೇಕ ಪೊಲೀಸರಿಗೆ ಕೊರೋನಾ ಪಾಸಿಟಿವ್ ಬರುತ್ತಿದೆ. ಹೀಗಾಗಿ ಜನರ ಮಧ್ಯೆ ಹೋಗಿ ಕೆಲಸ ಮಾಡಲು ಪೊಲೀಸರು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಹೋಂಗಾರ್ಡ್ಗೆ ಕೊರೊನಾ ಪಾಸಿಟಿವ್ ಬಂದಿರುವ ಶಂಕೆ ವ್ಯಕ್ತವಾಗಿದ್ದು, ಅಧಿಕೃತ ಮಾಹಿತಿ ಹೊರಬರಬೇಕಿದೆ.
ಸೋಂಕಿತ ಐವರು ಪೊಲೀಸರನ್ನೂ ಚಿಕಿತ್ಸೆಗಾಗಿ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇವರ ಸಂಪರ್ಕದಲ್ಲಿದ್ದ ಎಲ್ಲರ ಬಗ್ಗೆಯೂ ಆರೋಗ್ಯ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಹಾಗಾಗಿ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯನ್ನು ಮೂರನೇ ಬಾರಿಗೆ ಸೀಲ್‌ಡೌನ್ ಮಾಡಲಾಗಿದೆ.
ಈ ನಡುವೆ, ಜೂನ್30ರೊಳಗೆ ಎಲ್ಲಾ ಪೊಲೀಸರು ತಪಾಸಣೆ ಮಾಡಿಸಿಕೊಳ್ಳಿ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಆದೇಶಿಸಿದ್ಧಾರೆ. ಹೀಗಾಗಿ ನಮಗೂ ಕೊರೊನಾ ಬಂದಿದೆಯಾ ಎಂಬ ಆತಂಕ ಬೆಂಗಳೂರು ಪೊಲೀಸರನ್ನು ಕಾಡುತ್ತಿದೆ.
ವಂದೇ ಮಾತರಂ ಗೀತೆಯ ಸಾಲುಗಳು ಏಕದೇವೋಪಾಸನೆಯನ್ನು ನಂಬುವವರ ಧಾರ್ಮಿಕ ಭಾವನೆಗೆ ವಿರುದ್ಧವಾಗಿರಬಹುದು ಎಂದ ಶರ್ಮಿಳಾ ಟ್ಯಾಗೋರ್ ವಾದಕ್ಕೆ ಕಂಗನಾ ರನೌತ್ ಖಡಕ್ ಉತ್ತರ
ನವದೆಹಲಿ: ಭಾರತದ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿರುವ ವಂದೇ ಮಾತರಂ ಗೀತೆಯ ಕುರಿತು ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ ನೀಡಿರುವ ಹೇಳಿಕೆ ಈಗ ಬಾಲಿವುಡ್ ಮತ್ತು ರಾಜಕೀಯ...








