ರಿಯಲ್ ಸ್ಟಾರ್ ಉಪೇಂದ್ರ ಅವರು ಮತ್ತೊಮ್ಮೆ ಮೆದುಳಿಗೆ ಕೈ ಹಾಕಿದ್ದಾರೆ.
ಸದ್ಯ ಉಪೇಂದ್ರ ಅವರು, ಹಾಡಿನ ಅರ್ಥವನ್ನು ಹೇಗೆ ಬೇಕಾದರೂ ಕಲ್ಪಿಸಿಕೊಳ್ಳಿ ಎನ್ನುತ್ತ “ಚೀಪ್.. ಚೀಪ್.. ಎಲ್ಲಾ ಚೀಪ್ ಚೀಪ್.. ನಂದು ತುಂಬಾ ದೊಡ್ಡದು. ಅವನಿಗಿಂತ ನಿಂದು ಚಿಕ್ಕದು. ನಿಂದು ತುಂಬಾ ಚಿಕ್ಕದು, ಇವನಿಗಿಂತ ಅವಂದು ದೊಡ್ದು.. ಎನ್ನುತ್ತ ತಲೆಯಲ್ಲಿ ಹುಳು ಬಿಟ್ಟಿದ್ದಾರೆ.
ಡಬಲ್ ಮಿನಿಂಗ್ ಹಾಡನ್ನು ನಟ, ನಿರ್ದೇಶಕ ಉಪೇಂದ್ರ ಅವರು ಪ್ರೇಮಿಗಳ ದಿನದಂದು ತಮ್ಮ ಯುಐ ಸಿನಿಮಾದ ಹಾಡಿನ ತುಣುಕೊಂದನ್ನು ಬಿಡುಗಡೆ ಮಾಡಿದ್ದಾರೆ.
ಈ ಸಣ್ಣ ತುಣುಕು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದೆ. ಪೂರ್ಣ ಹಾಡನ್ನು ಇದೇ ತಿಂಗಳು 26ರಂದು ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ಹೇಳಿದ್ದರೂ ಅಲ್ಲಿಯವರೆಗೂ ತೆಲೆ ಕರೆದುಕೊಂಡು ನಾನಾ ಅರ್ಥಗಳನ್ನು ಹುಡುಕುವುದು ತಪ್ಪಿಲ್ಲ. ಈಗ ಅಭಿಮಾನಿಗಳ ತಲೆ ಕೆದರಿಕೊಂಡು ಅರ್ಥಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಇತ್ತೀಚೆಗಷ್ಟೇ ಯುಐ ಸಿನಿಮಾದ ಟೀಸರ್ ಬಿಡುಗಡೆಯಾಗಿತ್ತು. ಆಗ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಟೀಸರ್ ನೋಡಿದ ಉಪ್ಪಿ ಅಭಿಮಾನಿಗಳು ಸಾಕಷ್ಟು ತಲೆಕೆಡಿಸಿಕೊಂಡಿದ್ದಾರೆ.