ಶಿವಮೊಗ್ಗ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕೆಲವು ವ್ಯಕ್ತಿಗಳ ಕೈಯಲ್ಲಿ ಈಗ ಪಕ್ಷ ಸೇರಿಕೊಂಡಿದೆ. ನನಗೆ ಆಶೀರ್ವಾದ ಮಾಡಿದರೆ, ರಾಜ್ಯವನ್ನೇ ಬದಲಾಯಿಸುತ್ತೇನೆ. ನಾನು ಅಶೋಕನ ಕೆಳಗೆ ಕೆಲಸ ಮಾಡಬೇಕೆ ಎಂದು ಪ್ರಶ್ನಿಸಿದ್ದಾರೆ.
ಸದ್ಯದಲ್ಲಿಯೇ ರಾಜ್ಯದಲ್ಲಿ ಐಪಿಎಸ್ ಅಧಿಕಾರಿಯ ಬಂಧನವಾಗಲಿದೆ. ಸ್ವಯಂ ಘೋಷಿಸಿತ ಲಿಂಗಾಯತ ನಾಯಕರೊಬ್ಬರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಮೀಸಲಾತಿಗೆ ಅಡ್ಡ ಹಾಕಿದ್ದಾರೆ. ಬಹುತೇಕರು ನನ್ನನ್ನೇ ರಾಜ್ಯಾಧ್ಯಕ್ಷ ಮಾಡಬೇಕು ಅಂದರು. ಆದರೆ, ಕೆಲವರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ನನ್ನನ್ನು ತುಳಿದರು ಎಂದು ವಾಗ್ದಾಳಿ ನಡೆಸಿದ್ದಾರೆ.








