ಈಗಿರುವ ವಾಯುಮಾಲಿನ್ಯ ಮುಂದುವರೆದರೆ ದೇಶದಲ್ಲಿನ ಪ್ರತಿಯೊಬ್ಬರ ಆಯಸ್ಸು ಕ್ಷೀಣವಾಗುತ್ತದೆ. 51 ಕೋಟಿ ಜನರು ತಮ್ಮ ಜೀವನದ 7.6 ವರ್ಷ ಕಳೆದುಕೊಳ್ಳಲಿದ್ದಾರೆ ಎಂದು ಅಧ್ಯಯನ ಹೇಳಿದೆ.
ಚಿಕಾಗೋ ವಿಶ್ವವಿದ್ಯಾನಿಲಯದ ಎನರ್ಜಿ ಪಾಲಿಸಿ ಇನ್ಸ್ಟಿಟ್ಯೂಟ್ನ ವಾಯು ಗುಣಮಟ್ಟ ಜೀವನ ಸೂಚ್ಯಂಕವು 2013 ರಿಂದ ವಿಶ್ವ ಮಾಲಿನ್ಯದ ಶೇ. 44ರಷ್ಟು ಹೆಚ್ಚಳ ಭಾರತದಿಂದಾಗಿದೆ ಎಂದು ಹೇಳಿದೆ. 1998 ರಿಂದ, ಭಾರತದ ಸರಾಸರಿ ವಾರ್ಷಿಕ ಕಣಗಳ ಮಾಲಿನ್ಯ ಶೇ. 61.4 ಹೆಚ್ಚಾಗಿದೆ ಎಂದು ಅಧ್ಯಯನ ತಿಳಿಸಿದೆ.
ಏರ್ ಕ್ವಾಲಿಟಿ ಲೈಫ್ ಇಂಡೆಕ್ಸ್ ನ ವರದಿಯಂತೆ ವಾಯು ಮಾಲಿನ್ಯವು ಸರಾಸರಿ ಭಾರತೀಯ ಜೀವಿತಾವಧಿಯನ್ನು ಐದು ವರ್ಷಗಳಷ್ಟು ಕಡಿಮೆ ಮಾಡುತ್ತದೆ ಇಂಡೋ-ಗಂಗಾ ಬಯಲು ಪ್ರದೇಶದಲ್ಲಿ, 510 ಮಿಲಿಯನ್ ನಿವಾಸಿಗಳು, ದೇಶದ ಜನಸಂಖ್ಯೆಯ ಸುಮಾರು ಶೇ.40ರಷ್ಟು ಜನರು ಈ ಅಪಾಯದಲ್ಲಿದ್ದಾರೆ ಎಂದು ಹೇಳಿದೆ.
ಬಾಂಗ್ಲಾದೇಶದ ನಂತರ ಭಾರತವು ವಿಶ್ವದ ಎರಡನೇ ಅತಿ ಹೆಚ್ಚು ಮಾಲಿನ್ಯದ ದೇಶವಾಗಿದೆ. ಕೆಲವು ಪ್ರದೇಶಗಳು ಸರಾಸರಿಗಿಂತಲೂ ಹೆಚ್ಚು ಮಾಲಿನ್ಯ ಹೊಂದಿವೆ. ವಿಶ್ವದ ಅತ್ಯಂತ ಕಲುಷಿತ ನಗರವಾದ ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ವಾಯು ಮಾಲಿನ್ಯವು ಸುಮಾರು 10 ವರ್ಷಗಳ ಜೀವಿತಾವಧಿ ಕಡಿಮೆ ಮಾಡುತ್ತಿದೆ.








