ತುಮಕೂರು: ಆಸ್ತಿಗಾಗಿ ಪಾಪಿ ಮಗನೊಬ್ಬ ತನ್ನ ತಾಯಿಯನ್ನೇ ಕೊಠಡಿಯಲ್ಲಿ ಕೂಡಿ ಹಾಕಿರುವ ಘಟನೆ ನಡೆದಿದೆ.
ನಗರದ ಶಿರಾ ಗೇಟ್ ನ ಸಾಡೆಪುರದಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿ 11 ತಿಂಗಳಿನಿಂದ ಕೂಡಿ ಹಾಕಿದ್ದಾನೆ. ಸಿಡಿಪಿಒ ಆಗಿ ನಿವೃತ್ತರಾಗಿದ್ದ ಪಂಕಜಾಕ್ಷಿ (80) ಮಗನಿಂದ ದಿಗ್ಬಂಧನಕ್ಕೊಳಗಾದ ತಾಯಿ. ಪಂಕಜಾಕ್ಷಿ ಅವರಿಗೆ 50 ಸಾವಿರ ರೂ. ನಿವೃತ್ತಿ ವೇತನ ಬರುತ್ತಿದೆ. ಅಲ್ಲದೇ, ಅವರು 12 ಮನೆಗಳಿಗೆ ಹಕ್ಕುದಾರರು. ಸದ್ಯ ಈ ಆಸ್ತಿಗಾಗಿಯೇ ಮಗ ಜೇಮ್ ಸುರೇಶ್ ಹಾಗೂ ಈತನ ಪತ್ನಿ ಆಶಾ, ಪಂಕಜಾಕ್ಷಿ ಅವರಿಗೆ ಹಿಂಸೆ ನೀಡಿದ್ದಾರೆ. ಅಲ್ಲದೇ, ಮನೆಯಲ್ಲಿಯೇ ಕೂಡಿ ಹಾಕಿದ್ದಾರೆ.
ತಾಯಿಗೆ ಬರುತ್ತಿದ್ದ 50 ಸಾವಿರ ರೂ. ನಿವೃತ್ತಿ ವೇತನವನ್ನು ನಾಲ್ವರು ಮಕ್ಕಳು ಬಳಸುತ್ತಿದ್ದರು. ತಾಯಿ ಬಳಿ ಇದ್ದ ಒಡವೆಗಳನ್ನು ಕೂಡ ಮಕ್ಕಳು ಪಡೆದಿದ್ದಾರೆ. ಮನೆಗಳನ್ನು ಮಕ್ಕಳ ಹೆಸರಿಗೆ ಮಾಡಿಕೊಡಲು ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳೀಯರು ಸಾಂತ್ವನ ಕೇಂದ್ರ ಹಾಗೂ ಹಿರಿಯ ನಾಗರಿಕರ ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಲು ಹಾಗೂ ಪೊಲೀಸರು ರಕ್ಷಿಸಿ ಚಿಕಿತ್ಸೆ ನೀಡಿದ್ದಾರೆ. ಆನಂತರ ಅವರಿಗೆ ಚಿಕಿತ್ಸೆ ನೀಡಿದ್ದಾರೆ. ಇಷ್ಟಿದ್ದರೂ ತಾಯಿಯನ್ನು ನೋಡಲು ಮಕ್ಕಳು ಆಗಮಿಸಿಲ್ಲ. ನಂತರ ನ್ಯಾಯಾಧೀಶರು ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ.






