ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಏಕಾಏಕಿ ಝಡ್ ಪ್ಲಸ್ ಸೆಕ್ಯೂರಿಟಿ ನೀಡಲಾಗಿದೆ.
ಕಳೆದ ಮೂರು ದಿನಗಳಿಂದ ಮಲ್ಲಿಕಾರ್ಜುನ ಖರ್ಗೆ ಅವರ ಭದ್ರತೆ ಹೆಚ್ಚಾಗಿದ್ದು, Z+ ಸೆಕ್ಯುರಿಟಿ ನೀಡಲಾಗಿದೆ. ಅವರಿಗ ಸ್ಟೇಟ್ ಸೆಕ್ಯುರಿಟಿ ಜೊತೆಗೆ ಸಿಆರ್ ಪಿಎಫ್ Z+ ಸಕ್ಯೂರಿಟಿ ಸಹ ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ 8 ಜನ ಸಿಆರ್ಪಿಎಫ್ ಗನ್ ಮ್ಯಾನ್ ಗಳನ್ನು ನಿಯೋಜಿಸಲಾಗಿದೆ. ಇತ್ತೀಚೆಗೆ ಎಐಸಿಸಿ ಅಧ್ಯಕ್ಷರಿಗೆ ಬೆದರಿಕೆ ಕರೆ ಬಂದಿತ್ತು ಎನ್ನಲಾಗಿದೆ.
ಈ ಕಾರಣದಿಂದಾಗಿ ಕಳೆದ ಮೂರು ದಿನದಿಂದ Z+ ಸೆಕ್ಯುರಿಟಿ ನೀಡಲಾಗಿದೆ. ಅಲ್ಲದೇ, ಬೆಂಗಳೂರು ನಿವಾಸಕ್ಕೂ z+ ಸೆಕ್ಯುರಿಟಿ ನಿಯೋಜಿಸಲಾಗಿದೆ.