ಬೆಂಗಳೂರು : ನೋ ಲಾಕ್ ಡೌನ್, ನೋ ಲಾಕ್ ಡೌನ್ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣ ಮಾಡಲು ಸರ್ವಪಕ್ಷ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಬೆಂಗಳೂರಿನ ಶಾಸಕರು ಭಾಗವಹಿಸಿದ್ದರು.
ಸಭೆ ಬಳಿಕ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್, ಸರ್ವಪಕ್ಷ ಸಭೆಯಲ್ಲಿ 90ರಷ್ಟು ಶಾಸಕರು ಲಾಕ್ ಡೌನ್ ಬೇಡ ಎಂದು ಹೇಳಿದ್ದಾರೆ. ಕೊರೊನಾ ಸೋಂಕಿನ ಜೊತೆ ನಾವು ಜೀವನ ನಡೆಸಬೇಕಿದೆ. ಆದ್ದರಿಂದ ಲಾಕ್ ಡೌನ್ ಮಾಡುವುದಿಲ್ಲ. ಆದರೆ ಸೋಂಕು ನಿಯಂತ್ರಣ ಮಾಡಲು ರ್ಯಾಂಡ ಟೆಸ್ಟ್ಗಳನ್ನು ಹೆಚ್ಚು ಮಾಡಲು ನಿರ್ಧಾರ ಮಾಡಲಾಗಿದೆ. ಅಲ್ಲದೆ ಸಾಮೂಹಿಕ ಕ್ವಾರಂಟೈನ್ ಕೇಂದ್ರಗಳನ್ನು ಸ್ಥಾಪಿಲಾಗುತ್ತದೆ. ಕಲ್ಯಾಣಮಂಟಪ, ಕಂಠೀರವ, ಸ್ಟೇಡಿಯಂ ಸೇರಿದಂತೆ ಕೆಲ ಕಡೆ ಸಾಮೂಹಿಕ ಕ್ವಾರಂಟೈನ್ ಕೇಂದ್ರಗಳನ್ನು ಮಾಡಲು ತಯಾರಿ ನಡೆಯುತ್ತಿದೆ.
ಲಾಕ್ ಡೌನ್ ಬದಲಾಗಿ ಸೀಲ್ ಡೌನ್ ಪ್ರದೇಶಗಳನ್ನು ಹೆಚ್ಚು ಮಾಡಲಾಗುತ್ತದೆ. ಸೀಲ್ ಡೌನ್ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ. ಒಂದು ದಿನ 7500 ಕೊರೊನಾ ಟೆಸ್ಟ್ ಮಾಡಲು ಪ್ಲ್ಯಾನ್ ಮಾಡಲಾಗಿದೆ. ಜೊತೆಗೆ ಬೆಡ್ ಅಲಾಟ್ ಮೆಂಟ್ ಮಾಡಲು ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನೋಡಲ್ ಅಧಿಕಾರಿಯನ್ನ ನೇಮಕ ಮಾಡಲಾಗುತ್ತದೆ. ರಾಜ್ಯ ಮಟ್ಟದಲ್ಲಿ ಬೆಟ್ ಅಲಾಟ್ ಮೆಂಟ್ ಮಾಡುವ ಜವಬ್ದಾರಿಯನ್ನು ಐಏಎಸ್ ಅಧಿಕಾರಿ ತುಷಾರ್ ಗಿರಿನಾಥ್ ಅವರಿಗೆ ನೀಡಲಾಗಿದೆ ಅವರು ಪ್ರತಿ ಕ್ಷಣ ಕ್ಷಣ ಮಾಹಿತಿ ಪಡೆಯುತ್ತಾರೆ ಎಂದು ಹೇಳಿದ್ದಾರೆ.








