ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ16ನೇ ಕಂತಿನ ಹಣ ಫೆ. 28ರಂದು ಬಿಡುಗಡೆಯಾಗಲಿದೆ.
ಈ ಕುರಿತು ಪಿಎಂ ಕಿಸಾನ್ನ ಅಧಿಕೃತ ವೆಬ್ಸೈಟ್ ನಲ್ಲಿಯೇ ಮಾಹಿತಿ ನೀಡಲಾಗಿದೆ. ಫೆ. 28 ಬುಧವಾರದಂದು ಫಲಾನುಭವಿ ರೈತರ ಖಾತೆಗಳಿಗೆ 2 ಸಾವಿರ ರೂ. ಹಣ ವರ್ಗಾವಣೆಯಾಗಲಿದೆ. 2023ರ ಡಿಸೆಂಬರ್ನಿಂದ 2024 ಮಾರ್ಚ್ವರೆಗಿನ ಅವಧಿಯ ಕಂತಿನ ಹಣ ಇದಾಗಿದೆ. 15ನೇ ಕಂತಿನ ಹಣ ನವೆಂಬರ್ನಲ್ಲಿ ಬಿಡುಗಡೆಯಾಗಿತ್ತು. ಒಟ್ಟು 9 ಕೋಟಿಗೂ ತುಸು ಹೆಚ್ಚು ಫಲಾನುಭವಿಗಳ ಖಾತೆಗಳಿಗೆ ಸರ್ಕಾರ 18 ಸಾವಿರ ಕೋಟಿ ರೂ. ಬಿಡುಗಡೆ ಮಾಡಿತ್ತು.








