ಅಮೆರಿಕಾ ಅಮೆರಿಕಾ ಚಿತ್ರದ ಮೂಲಕ ಮನೆ ಮಾತಾಗಿದ್ದ ನಟಿ ಹೇಮಾ ಪ್ರಭಾತ್ ಈಗ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿಕೊಡಲು ಮುಂದಾಗಿದ್ದಾರೆ.
ಆದರೆ ಬಾರಿ ಸಿನಿಮಾ ಬದಲು ಕಿರುತೆರೆಗೆ ಎಂಟ್ರಿ ಕೊಡಲು ಮುಂದಾಗಿದ್ದಾರೆ. 90ರ ದಶಕದಲ್ಲಿ ಹೇಮಾ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಚೆಲುವಾಯಗಿದ್ದರು. ಆನಂತರ ಮದುವೆಮ ಮಾಡಿಕೊಂಡು ಚಿತ್ರಲೋಕದಿಂದ ದೂರವಾಗಿದ್ದರು. ಇತ್ತೀಚೆಗೆ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದರು.
ಈಗ ಸ್ಪಂದನಾ ಸೋಮಣ್ಣ, ಅಶ್ವೀನ್ ನಟನೆಯ ಕರಿಮಣಿ ಎಂಬ ಸೀರಿಯಲ್ ಗೆ ಉತ್ತಮ ಸ್ಪಂದನೆ ಸಿಗುತ್ತಿದ್ದರು. ಈ ಧಾರಾವಾಹಿಯಲ್ಲಿ ಹೇಮಾ ನಟಿಸುತ್ತಿದ್ದಾರೆ. ನಟಿ ಹೇಮಾ ಕಡೆಯದಾಗಿ 5 ವರ್ಷಗಳ ಹಿಂದೆ ರಕ್ಷಾ ಬಂಧನ ಸೀರಿಯಲ್ ನಲ್ಲಿ ನಟಿಸಿದ್ದರು. ಈಗ ಮತ್ತೆ ಅಮೆರಿಕಾ ಅಮೆರಿಕಾ ಚಿತ್ರದ ಭೂಮಿಕಾ ನಟನೆಯತ್ತ ಮುಖ ಮಾಡಿದ್ದು, ಅಭಿಮಾನಿಗಳಿಗೆ ಸಂತಸ ನೀಡಿದೆ.