ನವದೆಹಲಿ : ದೇಶದಲ್ಲಿ ಕೊರೊನಾಸುರನ ಆರ್ಭಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 15 ರವರೆಗೂ ಅಂತರಾಷ್ಟ್ರೀಯ ವಿಮಾನ ಕಾರ್ಯಚರಣೆಯನ್ನು ಸ್ಥಗೀತಗೊಳಿಸುವ ಚಿಂತನೆಯಲ್ಲಿ ವಿಮಾನಯಾನ ಸಚಿವಾಲಯ ಇದೆ ಎಂದು ತಿಳಿದು ಬಂದಿದೆ.
ಆಯ್ದ ಮಾರ್ಗಗಳಲ್ಲಿ ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ಅವಕಾಶ ನೀಡಲು ಸಚಿವಾಲಯ ನಿರ್ಧರಿಸಿದೆ. ಅಲ್ಲದೆ ಕೇಸ್ ಟು ಕೇಸ್ ಆಧಾರದ ಮೇಲೆ ಆಯ್ದ ಮಾರ್ಗಗಳಲ್ಲಿ ಮಾತ್ರ ಅಂತಾರಾಷ್ಟ್ರೀಯ ನಿಗದಿತ ವಿಮಾನಗಳಿಗೆ ಅನುಮತಿ ನೀಡಲು ನಾಗರಿಕ ವಿಮಾನಯಾನ ಸಚಿವಾಲಯ ಮುಂದಾಗಿದೆ.
ದೇಶದಲ್ಲಿ ಕೊರನಾ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ವಿಮಾನ ಕಾರ್ಯಚರಣೆ ಸ್ಥಗಿತಗೊಳಿಸಲಾಗಿತ್ತು. ಜುಲೈ 1 ರಿಂದ ವಿಮಾನ ಹಾರಾಟ ಶುರುವಾಗುತ್ತೆ ಎಂಬ ನಿರೀಕ್ಷೆಯಿತ್ತು. ಇದೀಗ ವಿಮಾನಯಾನಿಗಳ ನಿರೀಕ್ಷೆ ಹುಸಿಯಾಗಿದೆ.
ದೇಶದಲ್ಲಿ ಕಿಲ್ಲರ್ ಕೊರೊನಾ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ. 4.90 ಲಕ್ಷ ಜನರಿಗೆ ಕೊರೊನಾ ಸೋಂಕು ತಗುಲಿದೆ. ಅದರಲ್ಲಿ 15.301 ಮೃತಪಟ್ಟಿದ್ದಾರಡೆ. 2.86 ಸೋಂಕಿತರನ್ನು ಗುಣಮುಖರಾಗಿದ್ದಾರೆ.








