ತುಮಕೂರು: ಜಿಲ್ಲೆಯ ಶಿರಾ ತಾಲೂಕು ಕಳ್ಳಂಬೆಳ ಹತ್ತಿರದ ನೆಲದಿಮ್ಮನಹಳ್ಳಿ ಎಸ್ಸಿ ಕಾಲೋನಿಯಲ್ಲಿ ಬೆಳ್ಳಂಬೆಳಿಗ್ಗೆ ಹಲವಾರು ಗುಡಿಸಲುಗಳಿಗೆ ಬೆಂಕಿ ಹೊತ್ತಿಕೊಂಡಿರುವ ಘಟನೆ ನಡೆದಿದೆ.
ಈ ಪ್ರದೇಶದಲ್ಲಿ ಸುಮಾರು 20 ವರ್ಷಗಳಿಂದಲೂ 30 ಕುಟುಂಬಗಳು ವಾಸಿಸುತ್ತಿದ್ದವು. ಆದರೆ, ಈ ಪ್ರದೇಶದ ಜನರಿಗೆ ಗ್ರಾಪಂ ಯಾವುದೇ ಸೌಕರ್ಯ ಒದಗಿಸಿರಲಿಲ್ಲ. ಹೀಗಾಗಿ ಈ ಜನರು ಗುಡಿಸಲುಗಳಲ್ಲಿ ವಾಸಿಸುತ್ತಿದ್ದರು. ಆದರೆ, ಏಕಾಏಕಿ ಈ ಗುಡಿಸಲುಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಕುಟುಂಬಸ್ಥರು ದಿಕ್ಕು ತೋಚದಂತಾಗಿದ್ದಾರೆ. ಸದ್ಯ ನಮ್ಮ ಬದುಕಿಗೆ ಏನಾದರೂ ಆಧಾರ ಒದಗಿಸಬೇಕು ಎಂದು ಈ ಕುಟುಂಬಸ್ಥರು ಆಗ್ರಹಿಸಿದ್ದಾರೆ.








