ವಿಶ್ವ ಸುಂದರಿ ಸ್ಪರ್ಧೆ ಈ ಬಾರಿ ಭಾರತದ ಮುಂಬೈನಲ್ಲಿ ನಡೆಯಿತು. 28 ವರ್ಷಗಳ ಬಳಿಕ ನಡೆದ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಕ್ರಿಸ್ಟಿನಾ ಪಿಸ್ಕೋವಾ ಕಿರೀಟ ತೊಟ್ಟಿದ್ದಾರೆ.
71ನೇ ಮಿಸ್ ವರ್ಲ್ಡ್ ಆಗಿ ಕ್ರಿಸ್ಟಿನಾ ಪಿಸ್ಕೋವಾ ಸಂಭ್ರಮಿಸಿದ್ದಾರೆ. ಕರ್ನಾಟಕ ಮೂಲದ ಸಿನಿ ಶೆಟ್ಟಿ ಕೂಡ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ 115 ರಾಷ್ಟ್ರಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದವು. ಈ ಮೊದಲು ಭಾರತದ ಐಶ್ವರ್ಯಾ, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಕೆಲವರು ಈ ಪ್ರಶಸ್ತಿ ಪಡೆದಿದ್ದಾರೆ.
ಬಾಲಿವುಡ್ ನಟ ಕೃತಿ ಸನೋನ್, ಪೂಜಾ ಹೆಗ್ಡೆ ಸೇರಿದಂತೆ ಹಲವರು ಜಡ್ಜ್ ಆಗಿದ್ದರು. ಇದರೊಂದಿಗೆ ಮೂರು ಮಿಸ್ ವರ್ಲ್ಡ್ ಟೈಟಲ್ ಹೋಲ್ಡರ್ಗಳು ಕೂಡ ಇದರಲ್ಲಿ ಇದ್ದಾರೆ. ಕ್ರಿಸ್ಟಿನಾ ಅವರು ವಿದ್ಯಾರ್ಥಿನಿ. ಅಂತಾರಾಷ್ಟ್ರೀಯ ಮಾಡೆಲ್. ಲಾ ಹಾಗೂ ಬಿಸ್ನೆಸ್ ಅಡ್ಮಿಸ್ಟ್ರೇಷನ್ನಲ್ಲಿ ಅವರು ಶಿಕ್ಷಣ ಪಡೆಯುತ್ತಿದ್ದಾರೆ. ಅವರು ತಮ್ಮದೇ ಫೌಂಡೇಷನ್ ಆರಂಭಿಸಿ ಸಾಮಾಜಿಕ ಕೆಲಸ ಮಾಡುತ್ತಿದ್ದಾರೆ. ತಂಜಾನಿಯಾದಲ್ಲಿ ಬಡ ಮಕ್ಕಳಿಗಾಗಿ ಇಂಗ್ಲಿಷ್ ಸ್ಕೂಲ್ ಓಪನ್ ಮಾಡಿದ್ದಾರೆ.