ಶ್ರೀನಗರ : ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಜಮ್ಮು ಕಾಶ್ಮೀರ ವಿಷಯ ಪ್ರಸ್ತಾಪಿಸಿ ಮುಖಭಂಗಕ್ಕೊಳಗಾಗಿರುವ ಪಾಕಿಸ್ತಾನ ತನ್ನ ಹಳೆ ಚಾಳಿಯನ್ನ ಮಾತ್ರ ಬಿಟ್ಟಿಲ್ಲ. ಕಾಶ್ಮೀರ ವಿಚಾರವಾಗಿ ಈಗ ಮತ್ತೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮಾತನಾಡಿದ್ದು, ಕಾಶ್ಮೀರಿಗಳ ಸಮಸ್ಯೆಗಳನ್ನ ಪಾಕಿಸ್ತಾನ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತಾಪಿಸುತ್ತೆ. ಅವರ ರಾಯಭಾರಿಯಾಗಿ ಕೆಲಸ ಮಾಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.
ನಿನ್ನೆ ನಡೆದ ಪಾಕಿಸ್ತಾನದ ರಾಜ್ಯಗಳ ಪ್ರಮುಖರ ಸಭೆಯಲ್ಲಿ ಜಮ್ಮು- ಕಾಶ್ಮೀರದ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ ಇಮ್ರಾನ್ ಖಾನ್ ಮಾತನಾಡುತ್ತಾ, ಆಗಸ್ಟ್ 5 ಜಮ್ಮು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನ ರದ್ದುಗೊಳಿಸಿ ಭಾರತ ಕೇಂದ್ರ ಸರ್ಕಾರ, ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಣೆ ಮಾಡಿತ್ತು. ಈ ಹಿನ್ನೆಲೆಯಲ್ಲಿ 2020 ಆಗಸ್ಟ್ 5 ಕ್ಕೆ ಈ ಐತಿಹಾಸಿಕ ತೀರ್ಮಾನ ಕೈಗೊಂಡು ಒಂದು ವರ್ಷವಾಗಲಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ತನ್ನ ನಿರ್ಣಯದಲ್ಲಿ ಈಗ ಸಫಲವಾಗಿರಬಹುದು, ಆದರೆ ಪಾಕಿಸ್ತಾನ ಭಾರತ ಅದರ ಯಶಸ್ಸನ್ನು ಬಹಳ ದಿನಗಳ ಕಾಲ ಇಟ್ಟುಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.








