ಐಪಿಎಲ್ ಸೀಸನ್ ನ ಪ್ರತಿ ಬಾರಿಯೂ ಕಪ್ ನಮ್ದೇ ಎಂದೇ ಅಭಿಮಾನಿಗಳು ಹೇಳುತ್ತಿದ್ದರು. ಆದರೆ, ಈಗ ಮಹಿಳೆಯರು ಈ ಬರ ನೀಗಿಸಿದ್ದಾರೆ.
ಈ ಖುಷಿಯನ್ನು ಸುದೀಪ್ ಹಂಚಿಕೊಂಡಿದ್ದಾರೆ. ಸಿಸಿಎಲ್ ಫೈನಲ್ ಪಂದ್ಯ ಮುಗಿದ ನಂತರ ವೇದಿಕೆ ಏರಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಆರ್ಸಿಬಿ ಮೆನ್ಸ್ ತಂಡಕ್ಕೆ ಮುಂದಿರುವ ಚಾಲೆಂಜ್ ಏನು ಎಂಬುವುದನ್ನು ಕೂಡ ಹೇಳಿದ್ದಾರೆ. ‘ಇಷ್ಟು ದಿನ ಕಪ್ ನಮ್ಮದೇ ನಮ್ಮದೇ ಅಂತಿದ್ವಿ. ಈಗ ಕಪ್ ನಮ್ಮದಾಗಿದೆ. ಈಗ ಬಾಯ್ಸ್ ತಂಡದ ಮೇಲೆ ಸಾಕಷ್ಟು ಒತ್ತಡ ಇದೆ’ ಎಂದು ಸುದೀಪ್ ಹೇಳಿದ್ದಾರೆ.