ADVERTISEMENT
Saturday, June 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸಾವಿನ ಕೈಗೆ ಬದುಕು ಕೊಡುವುದು ಸಹ್ಯವಲ್ಲ

admin by admin
June 27, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಸಾವಿನ ಕೈಗೆ ಬದುಕು ಕೊಡುವುದು ಸಹ್ಯವಲ್ಲ

✍ ಪೇತ್ರಿ ವಿಶ್ವನಾಥ ಶೆಟ್ಟಿ

Related posts

80 ಲಕ್ಷದ ವಾಚ್ ಅಲ್ಲ ಇದು ಅಂಬೇಡ್ಕರ್ ಚಿತ್ರವಿರುವ ಎಚ್ ಎಂಟಿ ವಾಚ್ ಅನುಮಾನವಿದ್ದರೆ ಮನೆಗೆ ಎಸ್‌ಐಟಿ ಕಳಿಸಿ ಎಂದು ಕುಮಾರಸ್ವಾಮಿ ಸವಾಲು

80 ಲಕ್ಷದ ವಾಚ್ ಅಲ್ಲ ಇದು ಅಂಬೇಡ್ಕರ್ ಚಿತ್ರವಿರುವ ಎಚ್ ಎಂಟಿ ವಾಚ್ ಅನುಮಾನವಿದ್ದರೆ ಮನೆಗೆ ಎಸ್‌ಐಟಿ ಕಳಿಸಿ ಎಂದು ಕುಮಾರಸ್ವಾಮಿ ಸವಾಲು

June 27, 2026
ಕೋರ್ಟ್ ನಲ್ಲಿ ಕ್ಷಮೆ ಕೇಳಲು ನಿರಾಕರಿಸಿದ ಪ್ರದೀಪ್ ಈಶ್ವರ್: ಕಾನೂನು ಸಮರದಲ್ಲಿ ಪ್ರತಾಪ್ ಸಿಂಹಗೆ ಮೇಲುಗೈ?- ಚಿಕ್ಕಬಳ್ಳಾಪುರ ಶಾಸಕರಿಗೆ ಕಾನೂನು ಶಾಕ್

ಕೋರ್ಟ್ ನಲ್ಲಿ ಕ್ಷಮೆ ಕೇಳಲು ನಿರಾಕರಿಸಿದ ಪ್ರದೀಪ್ ಈಶ್ವರ್: ಕಾನೂನು ಸಮರದಲ್ಲಿ ಪ್ರತಾಪ್ ಸಿಂಹಗೆ ಮೇಲುಗೈ?- ಚಿಕ್ಕಬಳ್ಳಾಪುರ ಶಾಸಕರಿಗೆ ಕಾನೂನು ಶಾಕ್

June 27, 2026

ಕೊರೊನಾ ಎನ್ನುವ ಮಹಾಮಾರಿಯಿಂದ ಎಷ್ಟು ಜನ ಸಾವಿಗೆ ತುತ್ತಾದರೋ ಗೊತ್ತಿಲ್ಲ. ಆದರೆ ಇತ್ತೀಚೆಗೆ ಹೃದಾಯಾಘಾತದಿಂದ ಅದೆಷ್ಟೋ ಮಂದಿ ತಮ್ಮ ಕೊನೆಯುಸಿರೆಳೆದರು. ಇನ್ನು ಕೆಲವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ

ಚಿಂತೆ ಮತ್ತು ಚಿತೆ ಗೆ ನಡುವೆ ಇರುವುದು ಒಂದು ಸೊನ್ನೆ ಮಾತ್ರ ಎನ್ನುವುದನ್ನು ಕೇಳಿದ್ದೇವೆ. ಈಗಿನ ಪರಿಸ್ಥಿತಿಯಲ್ಲಿ ನಾವು ಅದನ್ನು ಕಣ್ಣಾರೆ ನೋಡುತ್ತಿದ್ದೇವೆ. ನಮ್ಮ ಜೀವನವೇ ಒಂದು ಪ್ರಶ್ನಾರ್ಥಕ ಚಿಹ್ನೆಯಲ್ಲಿದೆ ಸತ್ಯ. ಮುಂದೇನು ಎನ್ನುವುದು ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ. ಹಾಗಂತ ಅತಿಯಾಗಿ ಚಿಂತಿಸಿದಾಗ ಆರೋಗ್ಯದಲ್ಲಿ ಏರು ಪೇರಾಗುತ್ತದೆ. ಹೃದಯಾಘಾತವಾಗುತ್ತದೆ. ಅದಕ್ಕಾಗಿ ನಾವು ಸಮಧಾನ ಚಿತ್ತರಾಗಬೇಕಾಗಿದೆ
ಇದು ನಮಗೊಬ್ಬರಿಗೆ ಬಂದ ಸಮಸ್ಯೆಯಲ್ಲ. ಇಡೀ ಜಗತ್ತೇ ತೊಂದರೆಯಲ್ಲಿದೆ ಎನ್ನುವುದನ್ನು ನಾವು ಮರೆಯಬಾರದು.ಸಮಸ್ಯೆಗಳಿಗೆ ಒಂದಲ್ಲ ಒಂದು ರೀತಿಯ ಪರಿಹಾರೋಪಾಯವನ್ನು ಕಂಡುಕೊಳ್ಳಬೇಕೇ ಹೊರತು ಆತ್ಮಹತ್ಯೆ ಪರಿಹಾರವಲ್ಲ.

ನಿನ್ನೆ ದಿನ ಪುಣೆಯ ಹೋಟೆಲ್ ಉದ್ಯಮಿ ಪ್ರೇಮನಾಥ್ ಶೆಟ್ಟಿಯವರು ಆತ್ಮಹತ್ಯೆ ಶರಣಾದರು. ಪುಣೆ ಅಲ್ಲದೆ ಮುಂಬಯಿ ಹೋಟೆಲ್ ಮತ್ತು ಇತರ ಉದ್ಯಮಿಗಳೂ ಸಹ ಈ ಸುದ್ದಿಯಿಂದ ಗರಬಡಿದಂತಾದರು.
ಕೆಲವರಿಗೆ ಇದು ಕೇವಲ ಸುದ್ದಿ ಮಾತ್ರವಾದರೆ,ಹಲವರು ಆದ ಸಾವಿಗೊಂದು ಅನುಕಂಪ ಸಲ್ಲಿಸಿದರು. ಮತ್ತೆ ಕೆಲವರಿಗೆ ಈ ಆತ್ಮಹತ್ಯೆ ನಾಳಿನ ಬದುಕಿನ ಕುರಿತು ಗಾಢವಾಗಿ ಆಲೋಚಿಸುವಂತೆ ಮಾಡಿತು.

ಶೆಟ್ಟಿಯವರ ಆತ್ಮಹತ್ಯೆ ಎಲ್ಲ ಸಾವಿನಂತಲ್ಲ. ಅದೊಂದು ಎಚ್ಚರಿಕೆಯ ಗಂಟೆ

ಸಾಮಾಜಿಕ ಸಂಘಟನೆಗಳು, ಸಂಘ ಸಂಸ್ಥೆಗಳು ಈ ಸಾವಿನ ನಂತರ ಎಚ್ಚೆತ್ತುಕೊಳ್ಳದಿದ್ದರೆ ಮುಂದಾಗುವ ಎಷ್ಟೋ ಆತ್ಮಹತ್ಯೆಗಳಿಗೆ ವಿಷಾದ ಸಲ್ಲಿಸಬೇಕಾದ ದಿನಗಳು ದೂರವಿಲ್ಲ. ಜನರಿಗೆ ನಾಳಿನ ಭರವಸೆಯ ದಿನಗಳ ಕುರಿತು ಭರವಸೆಯ ನುಡಿಗಳನ್ನು ಹೇಳುವ ಅವಶ್ಯಕತೆಯಿದೆ. ಈ ಸಂದರ್ಭದಲ್ಲಿ ಸ್ವಾರ್ಥ ಬಿಟ್ಟು ಜನರ ಕಷ್ಟಗಳಿಗೆ ಇನ್ನಷ್ಟು ಸ್ಪಂದಿಸಬೇಕಾಗಿದೆ

ಇಲ್ಲವಾದಲ್ಲಿ ಲಾಕ್ ಡೌನ್ ಮುಗಿದ ಮೇಲೆ, ಬದುಕು ಕಟ್ಟಿಕೊಳ್ಳಲಾಗದೆ ಸಾವಿನ ಅರಮನೆಯ ಬಾಗಿಲು ಬಡಿಯುವ‌ ಜೀವಗಳು ಸಾವಿರಾರು ಆಗಲೂಬಹುದು.

ಮುಂದಿನ ದಿನಗಳಲ್ಲಿ ಕೊರೊನಾ ದೂರ ಆದರೆ ಆಗಬಹುದು ಯಾ ಅದನ್ನು ಎದುರಿಸಿ, ಅದರೊಂದಿಗೆ ಭಯದಿಂದಲೇ ಬದುಕು ಕಟ್ಟಿಕೊಳ್ಳುವ ಪರಿಸ್ಥಿತಿ ಬಂದರೂ ಬರಬಹುದು. ಎಲ್ಲಾ ಸರಿಯಾದರೂ ದೇಶ ಮತ್ತು ಜಗತ್ತಿನ ಆರ್ಥಿಕತೆ ವ್ಯವಸ್ಥಿತವಾಗಿ ಸುಧಾರಿಸಲು, ನಾವು ಮೊದಲಿನಂತಾಗಲು ಕೆಲವು ವರ್ಷಗಳು ಬೇಕಾಗಬಹುದು.‌ ಮುಂಬರುವ ದಿನಗಳಲ್ಲಿ ಔದ್ಯೋಗಿಕ ಸಂಸ್ಥೆಗಳು ಪ್ರಾರಂಭವಾಗುತ್ತವೆ. ಆದರೆ ಈ ಹಿಂದಿನ ದಿನಗಳಂತೆ ಕಾರ್ಯನಿರ್ವಹಿಸಲಾಗದ ಕಾರಣ ತನ್ನ ಉದ್ಯೋಗಿಗಳನ್ನು ನಾಳೆಯಿಂದ ಕೆಲಸಕ್ಕೆ ಬರಬೇಡಿ ಎಂದು ಯಾವುದೇ ಮುಲಾಜಿಲ್ಲದೆ ಹೇಳಿಬಿಡುತ್ತೆ. ಆಗ ಆತನ ಕಂಗಾಲಾಗುತ್ತಾನೆ. ಅದು ಸಹಜ. ಆತನೆದುರು ಬೆಟ್ಟದಷ್ಟು ತೊಂದರೆಗಳು, ಕಷ್ಟ ಕಾರ್ಪಣ್ಯಗಳು ಕೇಕೆ ಹಾಕಿ ನಲಿಯುತ್ತವೆ. ಆಗ ಆತ ಮಾತ್ರ ಅಸಹಾಯಕನಾಗುತ್ತಾನೆ

ಮನೆ ಬಾಡಿಗೆ,ಮಕ್ಕಳ ಶಾಲಾ ಕಾಲೇಜು ಖರ್ಚು, ಕುಟುಂಬ ನಿರ್ವಹಣೆಯ ಇತರೆ ಖರ್ಚುವೆಚ್ಚಗಳನ್ನು ಬರಿಸಲಾಗದೆ ಆತ ಕಂಗಾಲಾಗುತ್ತಾನೆ
ಮುಂದಿನ ಆತನ ನಿರ್ಧಾರ ಏನಾಗಬಹುದು ಆತ ಎತ್ತ ಮುಖ ಮಾಡುತ್ತಾನೆ ಅದು ಊಹಿಸಲು ಅಸಾಧ್ಯ.
ಇಂತಹ ಸಂದರ್ಭದಲ್ಲಿ ಆತನಿಗೆ ಯೋಗ್ಯ ರೀತಿಯಿಂದ ಬದುಕಿನ ಮಾರ್ಗದರ್ಶನ ಮಾಡುವ ಕೆಲಸ ಆಗಬೇಕು.
ಹಾಗೆಯೇ ಇಲ್ಲಿನ ಹೋಟೆಲ್ ಹಾಗು ಇತರ ಉದ್ಯಮಗಳನ್ನು ಪುನರಪಿ ಪ್ರಾರಂಭಿಸಲು ಮುಂದಾದರೆ, ನಾಲ್ಕು ತಿಂಗಳ ಬಾಕಿ ಕೊಟ್ಟರೆ ಮಾತ್ರ ಮಾಡಬಹುದು ಅಂತ ಜಾಗದ ಮಾಲಿಕ ಹಟಕ್ಕೆ ಬೀಳುತ್ತಾನೆ. ಅಲ್ಲಿ ಸ್ವಲ್ಪ ಹೊಕೈ ಆಗುತ್ತೆ. ಈಗಾಗಲೆ ಆಗಿಯೂ ಇದೆ.ಇಂತಹ ಪರಿಸ್ಥಿತಿಯಲ್ಲಿ ಮಧ್ಯಮ ವರ್ಗದವನ ಬದುಕು ಚಿಂದಿ ಚೂರಾಗುತ್ತೆ. ಆತನ ಕುಟುಂಬ ಬದುಕಿಗಾಗಿ ಅಂಗಾಲಾಚುವ ಪರಿಸ್ಥಿತಿ ಬರುತ್ತೆ. ಕೊನೆಗೆ ಬದುಕು ಅಸಾಧ್ಯ ಅಂತಾದಾಗ ಆತ ಒಂದು ನಿರ್ಧಾರಕ್ಕೆ ಬರುತ್ತಾನೆ. ಅದು ಪ್ರೇಮನಾಥ್ ಶೆಟ್ಟಿಯವರ ನಿರ್ಧಾರವಾಗುತ್ತೆ.

ಇಂತಹ ಸಾವುಗಳನ್ನು ತಪ್ಪಿಸಲು ಸಾಧ್ಯವಿಲ್ಲವಾ?

ಖಂಡಿತವಾಗಿಯೂ ತಪ್ಪಿಸಬಹುದು.

ಅದು ಹೇಗೆ??

ಜಾಗತೀಕರಣದ ಪ್ರವಾಹದ ನಂತರ ಸಂಬಂಧಗಳು ಕೇವಲ ಸಾಮಾಜಿಕ ಜಾಲತಾಣಕ್ಕೆ ಮಾತ್ರ ಸೀಮಿತವಾಗಿವೆ. ಈ ಸತ್ಯ ನಮಗೆಲ್ಲರಿಗೂ ಗೊತ್ತೆ ಇದೆ.
ಪ್ರಸ್ತುತ ವಿಧ್ಯಾಮಾನದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಿಂದ ಸಮಸ್ಯೆಗಳ ಕೈಗೊಂಬೆಗಳಾಗಿ ನಾಳಿನ ಚಿಂತೆಗಳಲ್ಲಿ ಮುಳುಗಿರುವವರು.
ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ನಾವು ನಮ್ಮ ಆತ್ಮೀಯ ಬಳಗದವರನ್ನು ಜಾಗ್ರತಗೊಳಿಸುವ ಕಾರ್ಯದಲ್ಲಿ ಕ್ರಿಯಾಶೀಲ ರಾಗಬೇಕು.ಇವತ್ತಿನ ದಿನಗಳಲ್ಲಿ ನಮ್ಮಲ್ಲಿ ಒಂದು ಸಾಮಾಜಿಕ ಕಳಕಳಿ ಇದೆ ಎನ್ನುವುದನ್ನು ನಾವು ಮರೆಯಬಾರದು.
ನಮ್ಮ ಆತ್ಮೀಯರೆಸಿಕೊಂಡವರಿಗೆ, ದಿನಕ್ಕೆ ಒಬ್ಬರಿಗೆ ಒಂದು ಕರೆ ಮಾಡಿ ಅವರ ಯೋಗ ಕ್ಷೇಮವನ್ನು ವಿಚಾರಿಸುವ.
ಸಾಧ್ಯವಾದರೆ ಅವರ ಸಮಸ್ಯೆಗಳಿಗೆ ಪರಿಹಾರ ಹುಡುಕಿ ಅವರ ಜೀವನೋತ್ಸಾಹ ಹೆಚ್ಚಿಸುವ.
ಇದು ಕೇವಲ ನಮಗೆ ಬಂದ ಸಂಕಟವಲ್ಲ. ಜಗತ್ತಿನ ಪ್ರತಿಯೊಬ್ಬರಿಗೂ ಬಂದಂತಹ ಕಷ್ಟ ಅನ್ನುವುದನ್ನು ಅವರಿಗೆ ಮನದಟ್ಟು ಮಾಡಿ ನಮಗಿಂತಲೂ ಕಷ್ಟದ ಜನರಿದ್ದಾರೆ ಭಯಪಡುವ ಅಗತ್ಯ ಇಲ್ಲ ಅಂತ ಅವರಿಗೆ ಸಮಾಜದ ಇತರ ಬಡವರ ಬದುಕನ್ನು ತೋರಿಸುವ. ನಾವು ನಮ್ಮ ಶ್ರೀಮಂತಿಕೆ,ಆಡಂಬರದ ಜೀವನಕ್ಕೆ ಕಡಿವಾಣ ಹಾಕುವ ಅನಿವಾರ್ಯತೆಯನ್ನು ಮನೆಮಂದಿಗೆಲ್ಲ ಮನದಟ್ಟು ಮಾಡುವ ಕೆಲಸವಾಗಬೇಕು.

ಮುಂದಿನ ದಿನಗಳು ಖಂಡಿತವಾಗಿಯೂ ಮೊದಲಿನಂತಾಗುತ್ತದೆ ಎಂಬ ಧೈರ್ಯದ ನುಡಿಯನ್ನು ನುಡಿಯಬೇಕಾಗಿದೆ. ಅವರಿಗೆ ಸ್ವಲ್ಪ ಕಷ್ಟವಾದರೂ ನಾವು‌ ಮೊದಲಿನಂತೆ ಬದುಕಬಲ್ಲೆವು ಎಂಬ ನಂಬಿಕೆಯನ್ನು ಮೂಡಿಸಬೇಕಾಗಿದೆ.

ಮಧ್ಯಮ ವರ್ಗದ ಜನ ಮತ್ತೆ ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು?

ಬುದ್ದಿಯನ್ನು ಚಿಂತನೆಗರ್ಪಿಸುವ.

ನಮ್ಮ ಕುಟುಂಬದ ಬದುಕಿನ ಬಂಡಿ ಒಡಿಸುವಾಗ ನಿಯತ್ತಾಗಿ ಮಾಡುವ ಕೆಲಸಗಳು ಚಿಕ್ಕದಾದರೂ ಅಂಜಬಾರದು.
ಲಕ್ಷ ದುಡಿಯುತ್ತಿದ್ದ ನಾನು ಸಾವಿರಕ್ಕೆ ದುಡಿಯಲಾರೆ ಅಂದರೆ ಬದುಕು ಮಕಾಡೆ ಮಲಗುತ್ತೆ.

ನನ್ನ ಮನೆತನಕ್ಕೂ ನಾನು ಇವತ್ತು ಮಾಡುವ ಕೆಲಸಕ್ಕೂ ಸಾಮ್ಯತೆ ಇಲ್ಲ.‌ ಸಣ್ಣ ಪುಟ್ಟ ವ್ಯಾಪಾರ ವಹಿವಾಟು ಮಾಡಿದರೆ ಅವಮಾನಕ್ಕೆ ಒಳಗಾಗಬಹುದು ಎನ್ನುವ ಮನೋಧರ್ಮದವರಿಗೆ ತಿಳಿಹೇಳುವ ಅವಶ್ಯಕತೆ ಇದೆ
ಬದಲಾವಣೆ ಅಗತ್ಯ ಇದೆ  ಇಲ್ಲವಾದಲ್ಲಿ ಬದುಕು ಚರಂಡಿ ಹಿಡಿಯುತ್ತೆ.

ವ್ಯಾಪಾರದಲ್ಲಿ ಇಷ್ಟೇ ಲಾಭ ಬೇಕು ಎಂಬ ಧೋರಣೆಯನ್ನು ಬಿಟ್ಟು ಪಾಲಿಗೆ ಬಂದದ್ದೆ ಪಂಚಾಮ್ರತ ಅಂದರೆ ಜೀವನ ಸುಗಮ.

ಸದ್ಯದ ಪರಿಸ್ಥಿತಿಯಲ್ಲಿ ಬಾಡಿಗೆ ಪಡೆಯುವ ಮಾಲಿಕರು ಹೃದಯ ವೈಶಾಲ್ಯತೆಯನ್ನು ತೋರಿಸಬೇಕಾಗಿದೆ. ಈ ಹೊತ್ತಲ್ಲಿ ಅದೊಂದು ತರದ‌ ದೇವತಾ ಕಾರ್ಯ ಮತ್ತು ದೇಶ ಸೇವೆಗಿಂತ ಕಡಿಮೆ ಅಲ್ಲ.

ಆಸೆಗಳು ಸೀಮಿತವಾಗಿದ್ದಲ್ಲಿ ಮಾತ್ರ ಬದುಕು ಜಿಂಗಲಾಲ.

ಎಂಟು ಹತ್ತು ಗಂಟೆ ಗಡದ್ದಾದ ನಿದ್ರೆಯನ್ನು ಹೆಚ್ಚೆಂದರೆ ಏಳಕ್ಕಿಳಿಸಿ ಎರಡು ಗಂಟೆ ಆರೋಗ್ಯಕ್ಕೆ ಕೊಟ್ಟರೆ ಬರುವ ಕಷ್ಟದ ದಿನಗಳನ್ನು ಆತ್ಮಬಲದಿಂದ ಎದುರಿಸಬಹುದು.

ಸಿಕ್ಕ ಸಮಯವನ್ನು ಚಿಂತೆಯಲ್ಲಿ ಕಳೆಯುವುದಕ್ಕಿಂತ ಚಿಂತನಾತ್ಮಕ ಕಾರ್ಯಗಳಿಗೆ ಅರ್ಪಿಸುವ.

ಯೋಚನೆ ಮತ್ತು ಯೋಜನೆ ಒಂದಕ್ಕೊಂದು ಸಾಮೀಪ್ಯವಾಗಿರಲಿ

ಎಷ್ಟೋ ಲಕ್ಷ ಜೀವ ಜಂತುಗಳಾಗಿ ಹುಟ್ಟಿ ಬಂದ ನಂತರ ಮನುಷ್ಯ ಜನ್ಮ ಸಿಗುತ್ತದೆ ಎಂದು ಸನಾತನ ಧರ್ಮ ಹೇಳುತ್ತೆ ಇಂತಹ ಪವಿತ್ರವಾದ ಮನುಷ್ಯ ಜನ್ಮವನ್ನು ಆತ್ಮಹತ್ಯೆ ಎಂಬ ಕಾಲನ ಕೈಗರ್ಪಿಸುವಷ್ಟು ನಾವು ಹೇಡಿಗಳಾಗುವುದು ಬೇಡ.
ಇಂದಿಗಿಂತ ನಾಳೆಯ ಜೀವನ ಸುಂದರಾವಾಗಿರುತ್ತೆ ಎಂಬ ಆಶಾಭಾವನೆಯೊಂದಿಗೆ ಬದುಕು ಮತ್ತೆ ಕಟ್ಟಿಕೊಳ್ಳುವ..
🌹🌹🌹🌹🌹🙏

Tags: CoronaFinancialindiakarnatakaLockdownmumbaisuicide
ShareTweetSendShare
Join us on:

Related Posts

80 ಲಕ್ಷದ ವಾಚ್ ಅಲ್ಲ ಇದು ಅಂಬೇಡ್ಕರ್ ಚಿತ್ರವಿರುವ ಎಚ್ ಎಂಟಿ ವಾಚ್ ಅನುಮಾನವಿದ್ದರೆ ಮನೆಗೆ ಎಸ್‌ಐಟಿ ಕಳಿಸಿ ಎಂದು ಕುಮಾರಸ್ವಾಮಿ ಸವಾಲು

80 ಲಕ್ಷದ ವಾಚ್ ಅಲ್ಲ ಇದು ಅಂಬೇಡ್ಕರ್ ಚಿತ್ರವಿರುವ ಎಚ್ ಎಂಟಿ ವಾಚ್ ಅನುಮಾನವಿದ್ದರೆ ಮನೆಗೆ ಎಸ್‌ಐಟಿ ಕಳಿಸಿ ಎಂದು ಕುಮಾರಸ್ವಾಮಿ ಸವಾಲು

by Shwetha
June 27, 2026
0

ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ ಐಷಾರಾಮಿ ವಾಚ್ ಗಳ ಬಗ್ಗೆ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ತಮ್ಮದೇ ಶೈಲಿಯಲ್ಲಿ ಖಡಕ್ ತಿರುಗೇಟು ನೀಡಿದ್ದಾರೆ. ಇತ್ತೀಚೆಗೆ...

ಕೋರ್ಟ್ ನಲ್ಲಿ ಕ್ಷಮೆ ಕೇಳಲು ನಿರಾಕರಿಸಿದ ಪ್ರದೀಪ್ ಈಶ್ವರ್: ಕಾನೂನು ಸಮರದಲ್ಲಿ ಪ್ರತಾಪ್ ಸಿಂಹಗೆ ಮೇಲುಗೈ?- ಚಿಕ್ಕಬಳ್ಳಾಪುರ ಶಾಸಕರಿಗೆ ಕಾನೂನು ಶಾಕ್

ಕೋರ್ಟ್ ನಲ್ಲಿ ಕ್ಷಮೆ ಕೇಳಲು ನಿರಾಕರಿಸಿದ ಪ್ರದೀಪ್ ಈಶ್ವರ್: ಕಾನೂನು ಸಮರದಲ್ಲಿ ಪ್ರತಾಪ್ ಸಿಂಹಗೆ ಮೇಲುಗೈ?- ಚಿಕ್ಕಬಳ್ಳಾಪುರ ಶಾಸಕರಿಗೆ ಕಾನೂನು ಶಾಕ್

by Shwetha
June 27, 2026
0

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ನಡುವಿನ ಕಾನೂನು ಸಂಘರ್ಷ ಈಗ ಹೊಸ ತಿರುವು ಪಡೆದುಕೊಂಡಿದೆ. ಪ್ರದೀಪ್ ಈಶ್ವರ್ ಅವರು ತಮ್ಮ...

CM Yogi Adityanath

ಸನಾತನ ಧರ್ಮದ ಜೊತೆ ಆಟವಾಡಿದರೆ ಸುಮ್ಮನಿರಲ್ಲ: ಅಯೋಧ್ಯೆ ದೇಣಿಗೆ ಹಗರಣದ ಬೆನ್ನಲ್ಲೇ ಗುಡುಗಿದ ಸಿಎಂ ಯೋಗಿ

by Shwetha
June 27, 2026
0

ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ವಿಶ್ವದಾದ್ಯಂತ ಇರುವ ಕೋಟ್ಯಂತರ ಭಕ್ತರು ಶ್ರದ್ಧಾಭಕ್ತಿಯಿಂದ ಸಮರ್ಪಿಸಿದ ದೇಣಿಗೆ ಮತ್ತು ಕಾಣಿಕೆಯನ್ನು ದುರುಪಯೋಗಪಡಿಸಿಕೊಂಡ ಘಟನೆ ಈಗ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಈ ಅಕ್ರಮದ...

ಅಡ್ಡ ಮತದಾನಕ್ಕೆ ನಾನೇ ಕಾರಣ ಎಂಬ ಆರೋಪ ಸುಳ್ಳು : ನನ್ನ ಟೈಮ್ ಚೆನ್ನಾಗಿದೆ, ಪಕ್ಷ ವಿರೋಧಿಗಳಿಗೆ ಹೆದರಲ್ಲ- ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಿರೋಧಿಗಳಿಗೆ ವಿಜಯೇಂದ್ರ ಖಡಕ್ ಉತ್ತರ

ಅಡ್ಡ ಮತದಾನಕ್ಕೆ ನಾನೇ ಕಾರಣ ಎಂಬ ಆರೋಪ ಸುಳ್ಳು : ನನ್ನ ಟೈಮ್ ಚೆನ್ನಾಗಿದೆ, ಪಕ್ಷ ವಿರೋಧಿಗಳಿಗೆ ಹೆದರಲ್ಲ- ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಿರೋಧಿಗಳಿಗೆ ವಿಜಯೇಂದ್ರ ಖಡಕ್ ಉತ್ತರ

by Shwetha
June 27, 2026
0

ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ಬೆಳವಣಿಗೆಯಿಂದ ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಗೊಂದಲಗಳಿಗೆ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಈಗ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ...

ಇಡಿ ಸಿಬಿಐ ಭಯಕ್ಕೆ ತಾಯಿಯಂತಾ ಪಕ್ಷವನ್ನೇ ಮಾರಿಕೊಂಡ್ರು: ಹೆತ್ತ ತಾಯಿಗೆ ದ್ರೋಹ ಬಗೆದಂತೆ ಪಕ್ಷಾಂತರ- ದ್ರೋಹಿಗಳಿಗೆ ಜನರೇ ಪಾಠ ಕಲಿಸ್ತಾರೆ ಎಂದು ಗುಡುಗಿದ ಮಮತಾ ಬ್ಯಾನರ್ಜಿ

ಇಡಿ ಸಿಬಿಐ ಭಯಕ್ಕೆ ತಾಯಿಯಂತಾ ಪಕ್ಷವನ್ನೇ ಮಾರಿಕೊಂಡ್ರು: ಹೆತ್ತ ತಾಯಿಗೆ ದ್ರೋಹ ಬಗೆದಂತೆ ಪಕ್ಷಾಂತರ- ದ್ರೋಹಿಗಳಿಗೆ ಜನರೇ ಪಾಠ ಕಲಿಸ್ತಾರೆ ಎಂದು ಗುಡುಗಿದ ಮಮತಾ ಬ್ಯಾನರ್ಜಿ

by Shwetha
June 27, 2026
0

ಪಕ್ಷದ ಸಂಕಷ್ಟದ ಸಮಯದಲ್ಲಿ ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿರುವ ಶಾಸಕರು ಮತ್ತು ಸಂಸದರ ವಿರುದ್ಧ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram