ಮಾರ್ಚ್ 22ರಿಂದ 17ನೇ ಆವೃತ್ತಿ ಆರಂಭವಾಗಲಿದೆ. ಈಗಾಗಲೇ ಎಲ್ಲರೂ ಕಾತುರದಿಂದ ಕಾಯುತ್ತಿರುವ ಈ ಟೂರ್ನಿಯಲ್ಲಿ ಹಲವು ದಾಖಲೆಗಳು ಮೂಡಲಿರುವುದು ಸಾಮಾನ್ಯ. ಆದರೆ, ಈ ಕಠಿಣ ದಾಖಲೆಯನ್ನು ಯಾರಾದರೂ ಮುರಿಯುವರಾ ಎಂಬ ಚರ್ಚೆ ಅಭಿಮಾನಿಗಳಲ್ಲಿ ಶುರುವಾಗಿದೆ.
2013 ರಲ್ಲಿ ಆರ್ಸಿಬಿಯ ಅಂದಿನ ಆಟಗಾರನಾಗಿದ್ದ ಗೇಲ್, ಪುಣೆ ವಾರಿಯರ್ಸ್ ವಿರುದ್ಧ ಪಂದ್ಯದಲ್ಲಿ ಕೇವಲ 66 ಎಸೆತಗಳಲ್ಲಿ 175 ರನ್ ಗಳಿಸಿದ್ದರು. ಐಪಿಎಲ್ ನಲ್ಲಿಯೇ ಬ್ಯಾಟರ್ ಒಬ್ಬ ಕಲೆಹಾಕಿದ ಅತ್ಯಧಿಕ ವೈಯಕ್ತಿಕ ಸ್ಕೋರ್ ಇದಾಗಿದೆ. ಗೇಲ್ 13 ಬೌಂಡರಿ ಮತ್ತು 17 ಸಿಕ್ಸರ್ ಸಿಡಿಸಿದ್ದರು.
ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಡಿರುವ 14 ಆವೃತ್ತಿಗಳಲ್ಲಿ ಬರೋಬ್ಬರಿ 12 ಬಾರಿ ಪ್ಲೇ ಆಫ್ ಪ್ರವೇಶಿಸಿದೆ. ಈ ಪೈಕಿ ದಾಖಲೆಯ 10 ಬಾರಿ ಫೈನಲ್ ಪ್ರವೇಶಿಸಿದೆ. 16 ಐಪಿಎಲ್ ಸೀಸನ್ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐದು ಬಾರಿ ಐಪಿಎಲ್ ಟ್ರೋಫಿ ಎತ್ತಿದೆ.
ವಿರಾಟ್ ಕೊಹ್ಲಿ 2016 ರ ಐಪಿಎಲ್ನಲ್ಲಿ ಆಡಿದ 16 ಪಂದ್ಯಗಳಲ್ಲಿ 973 ರನ್ ಗಳಿಸಿದ್ದರು. 4 ಶತಕ ಮತ್ತು 7 ಅರ್ಧ ಶತಕಗಳು ಸೇರಿವೆ. ಕೊಹ್ಲಿ ಕಲೆಹಾಕಿರುವ 973 ರನ್ ಇದುವರೆಗೆ ಐಪಿಎಲ್ ಸೀಸನ್ ವೊಂದರಲ್ಲಿ ಆಟಗಾರ ಅತ್ಯಧಿಕ ಸ್ಕೋರ್ ಆಗಿದೆ.
ಎಂಎಸ್ ಧೋನಿ ಹೆಸರಿನಲ್ಲಿ ಅತಿ ಹೆಚ್ಚು ಐಪಿಎಲ್ ಪಂದ್ಯಗಳನ್ನು ಆಡಿದ ನಾಯಕನೆಂಬ ದಾಖಲೆ ಸೃಷ್ಟಿಯಾಗಿದೆ. ಧೋನಿ ನಾಯಕನಾಗಿ 226 ಪಂದ್ಯ ಆಡಿದ್ದಾರೆ. 2008 ರಲ್ಲಿ ಲೀಗ್ ಪ್ರಾರಂಭವಾದಾಗಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿರುವ ಧೋನಿ 16 ವರ್ಷಗಳಿಂದ ನಾಯಕರಾಗಿಯೇ ಇದ್ದಾರೆ.
2016 ರಲ್ಲಿ ಆ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಎರಡನೇ ವಿಕೆಟ್ಗೆ ದಾಖಲೆಯ 229 ರನ್ ಕಾಣಿಕೆ ನೀಡಿದ್ದರು. ಈ ಜೊತೆಯಾಟವನ್ನು ಬೇರೆ ಯಾವ ಜೋಡಿಗೂ ಮುರಿಯಲು ಸಾಧ್ಯವಾಗಿಲ್ಲ. ಈ ಸೀಸನ್ ನಲ್ಲಿ ಈ ದಾಖಲೆಗಳಲ್ಲಿ ಒಂದು ದಾಖಲೆಯಾದರೂ ಅಳಿಸಬಹುದೇ ಎಂಬುವುದನ್ನು ಕಾಯ್ದು ನೋಡಬೇಕಿದೆ.