ಮುಂಬೈ : ಈ ಬಾರಿಯ ಗಣೇಶ ಚತುರ್ಥಿ ಮೇಲೂ ಕೊರೊನಾ ಕರಿನರೆಳು ಬಿದ್ದಿದೆ. ಕೊರೊನಾ ಸೋಂಕು ಭೀತಿ ಹಿನ್ನೆಲೆ
ಮುಂಬರುವ ಗಣೇಶ ಉತ್ಸವದಲ್ಲಿ ಗಣೇಶನ ಪೆಂಡಾಲ್‌ಗಳಲ್ಲಿ ನಾಲ್ಕು ಅಡಿಗಿಂತ ಹೆಚ್ಚಿನ ಗಣೇಶ ಪ್ರತಿಮೆಗಳನ್ನು ಸ್ಥಾಪಿಸಬಾರದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣೇಶ ಮಹೋತ್ಸವ ಆಗಸ್ಟ್ 22 ರಿಂದ ರಾಜ್ಯದಲ್ಲಿ ಪ್ರಾರಂಭವಾಗಲಿದೆ. ಮುಂಬೈನಲ್ಲಿ ಗಣಪತಿಯ ಉನ್ನತ ಪ್ರತಿಮೆಗಳನ್ನು ಸ್ಥಾಪಿಸಲು ವಿಶೇಷ ಅಭ್ಯಾಸವಿದೆ.
ಮುಂಬೈ ಮತ್ತು ಪುಣೆಯಲ್ಲಿ ಜನರು ದೊಡ್ಡ ಮತ್ತು ಎತ್ತರದ ಗಣೇಶ ವಿಗ್ರಹಗಳನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ದೊಡ್ಡ ದೊಡ್ಡ ಪ್ರತಿಮೆಗಳಿಗೆ ಹೆಚ್ಚಿನ ಸಂಖ್ಯೆಯ ಸ್ವಯಂಸೇವಕರ ಅಗತ್ಯವಿದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ಈ ಜನಸಮೂಹವನ್ನು ಸಾಂಕ್ರಾಮಿಕ ರೋಗದಿಂದ ತಪ್ಪಿಸಬೇಕು ಎಂದು ಸಿಎಂ ಠಾಕ್ರೆ ಕರೆ ನೀಡಿದ್ದಾರೆ.
ಇನ್ನು ಈ ಹಿಂದೆ ಕೂಡ ಕೊರೊನಾವೈರಸ್ ಸಾಂಕ್ರಾಮಿಕವನ್ನು ಗಮನದಲ್ಲಿಟ್ಟುಕೊಂಡು ಗಣೇಶ ಉತ್ಸವಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಠಾಕ್ರೆ ಗಣೇಶ ಮಂಡಳಿಗಳಿಗೆ ಮನವಿ ಮಾಡಿದ್ದರು.








