370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಕಾಶ್ಮೀರದಲ್ಲಿ ಪರಿಸ್ಥಿತಿ ಹೇಗೆ ಬದಲಾಗಿದೆ ಎಂಬುದರ ಒಂದು ನೋಟ ಮಹಾಶಿವರಾತ್ರಿಯಂದು ಕಂಡುಬಂತು. ದೇಶದ ಇತರ ಭಾಗಗಳಿಂದ ಕಾಶ್ಮೀರಕ್ಕೆ ಭೇಟಿ ನೀಡಲು ಬಂದ ಭದ್ರತಾ ಸಿಬ್ಬಂದಿ ಮತ್ತು ಪ್ರವಾಸಿಗರು ಸಹ ಶಿವರಾತ್ರಿಯಂದು ಪ್ರಾರ್ಥನೆ ಸಲ್ಲಿಸಲು ಶ್ರೀನಗರದ ಶಂಕರಾಚಾರ್ಯ ದೇವಾಲಯಕ್ಕೆ ಭೇಟಿ ನೀಡಿದರು.
ದಾಲ್ ಸರೋವರದ ದಂಡೆಯಲ್ಲಿರುವ ಶಂಕರಾಚಾರ್ಯ ದೇವಸ್ಥಾನವನ್ನು ಮಹಾಶಿವರಾತ್ರಿಯ ಸಂದರ್ಭದಲ್ಲಿ ವರ್ಣರಂಜಿತ ದೀಪಗಳಿಂದ ಬೆಳಗಿಸಲಾಯಿತು. ಅದರ ನೆರಳು ಹಲವು ಕಿಲೋಮೀಟರ್ ದೂರದ ವರೆಗೆ ಗೋಚರಿಸಿತು.
ಶಂಕರಾಚಾರ್ಯ ದೇವಸ್ಥಾನ ಬೆಳಗುತ್ತಿರುವ ಫೋಟೋ ಫೇಸ್ಬುಕ್, ಟ್ವಿಟರ್ ಮತ್ತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆರ್ಟಿಕಲ್ 370 ಅನ್ನು ತೆಗೆದುಹಾಕಿದ ನಂತರ ದಶಕಗಳ ಕತ್ತಲೆ ಕಣ್ಮರೆಯಾಯಿತು ಎಂದು ಫೇಸ್ ಬುಕ್ ನಲ್ಲಿ ಕೆಲವರು ಫೋಟೋಗಳೊಂದಿಗೆ ಸಂದೇಶಗಳನ್ನು ಬರೆದಿದ್ದಾರೆ. ಕಿರಣ್ ಬೇಡಿ ಕೂಡ ಈ ಚಿತ್ರವನ್ನು ಟ್ವೀಟ್ ಮಾಡಿ, “ದಶಕಗಳ ಕತ್ತಲೆಯ ನಂತರ, ಶ್ರೀನಗರದ ಬಳಿಯಿರುವ ಶಂಕಾರಾಚಾರ್ಯ ದೇವಸ್ಥಾನ ಮಹಾಶಿವರಾತ್ರಿಗಾಗಿ ಬೆಳಗಿದೆ” ಎಂದು ಬರೆದಿದ್ದಾರೆ.








