ನವದೆಹಲಿ: ರಾಷ್ಟ ರಾಜಧಾನಿ ನವದೆಹಲಿಯಲ್ಲಿ ಮಹಾಮಾರಿ ಕೊರೊನಾ ಸೋಂಕು ಸಮುದಾಯಕ್ಕೆ ಹರಡಿಲ್ಲ, ನಿಯಂತ್ರಣದಲ್ಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಜುಲೈ31ರ ವೇಳೆಗೆ ದೆಹಲಿಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 5.5 ಲಕ್ಷಕ್ಕೆ ಹೋಗುತ್ತದೆ. ಆಸ್ಪತ್ರೆಗಳು ಫುಲ್ ಆಗಿ ಬೆಡ್‌ಗಳೇ ಇಲ್ಲದ ಸ್ಥಿತಿ ಬರಲಿದೆ ಎಂದಿದ್ದ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಹೇಳಿಕೆಯನ್ನು ಅಲ್ಲಗಳೆದಿರುವ ಅಮಿತ್ ಶಾ, ಸಿಸೋಡಿಯಾ ಹೇಳಿಕೆ ಜನರಲ್ಲಿ ಭೀತಿ ಸೃಷ್ಟಿಸುವಂತೆ ಮಾಡಿದೆ. ಹೀಗಾಗಿ ಸಿಸೋಡಿಯಾ ಅವರ ಲೆಕ್ಕಾಚಾರ ಕೇವಲ ಊಹೆಯೇ ಹೊರತು ವಾಸ್ತವಕ್ಕೆ ಹತ್ತಿರವಾಗಿಲ್ಲ ಎಂದಿದ್ದಾರೆ.
ಕೊರೊನಾ ಸೋಂಕು ಸಮುದಾಯಕ್ಕೆ ಹರಡಿರುವ ಸಾಧ್ಯತೆ ಬಗ್ಗೆ ತಜ್ಞರಿಂದಲೂ ಅಭಿಪ್ರಾಯ ಪಡೆದಿದ್ದೇನೆ. ಅವರ ಪ್ರಕಾರ ದೆಹಲಿಯಲ್ಲಿ ಅಂತಹ ಸ್ಥಿತಿ ಬಂದಿಲ್ಲ. ಒಂದು ವೇಳೆ ದೆಹಲಿಯಲ್ಲಿರುವ ಎಲ್ಲಾ ಜನರ ಪರೀಕ್ಷೆ ನಡೆಸಿದಾಗ ಮಾತ್ರ ಇಂತಹ ನಿರ್ಧಾರಕ್ಕೆ ಬರಬಹುದು. ಈಗ ಕೇವಲ ಶೇ.30ರಷ್ಟು ಜನರ ಪರೀಕ್ಷೆ ಮಾಡಲಾಗಿದೆ. ಅದರಲ್ಲೂ ಸೋಂಕಿನ ಲಕ್ಷಣ ಇರುವವರನ್ನು ಮಾತ್ರ ಪರೀಕ್ಷೆ ಮಾಡಲಾಗಿದೆ. ಹೀಗಾಗಿ ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.
ಚಿನ್ನದ ಮೇಲೆ ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ? ಹಾಗಾದರೆ ನಿರ್ಧಾರ ತೆಗೆದುಕೊಳ್ಳುವ ಮುನ್ನ ಈ ಮಾಹಿತಿ ಓದಿ
ಭಾರತೀಯರ ಪಾಲಿಗೆ ಚಿನ್ನ ಕೇವಲ ಆಭರಣವಲ್ಲ, ಅದೊಂದು ಭಾವನೆ, ಪರಂಪರೆ ಮತ್ತು ಆಪತ್ಕಾಲದಲ್ಲಿ ಕೈಹಿಡಿಯುವ ಅತಿ ದೊಡ್ಡ ಆಸ್ತಿ. ಮನೆಯಲ್ಲಿ ಒಂದು ಶುಭ ಕಾರ್ಯ ನಡೆಯಲಿ ಅಥವಾ...








