ಕೊರೊನಾ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಸೇಬು ಅಮದು ಸ್ಥಗಿತ
ಬೆಂಗಳೂರು, ಜೂನ್ 28- ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸೇಬುಗಳನ್ನು ಬೇರೆ ದೇಶಗಳಿಂದ ಅಮದು ಮಾಡಿಕೊಳ್ಳದಂತೆ ನಿರ್ಧಾರ ಕೈಗೊಳ್ಳಲಾಗಿದೆ.
ಹಣ್ಣು ಮತ್ತು ತರಕಾರಿಗಳ (ವಿಶೇಷ) ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಕೊರೋನಾ ವೈರಸ್ ಸೋಂಕು ಹರಡುವಿಕೆ ನಿಲ್ಲುವವರೆಗೆ ಸೇಬುಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳದಂತೆ ಸೂಚಿಸಿದೆ. ಅಷ್ಟೇ ಅಲ್ಲ ಕೊರೊನಾ ಸೋಂಕು ಕಾಣಿಸಿಕೊಂಡಿರುವ ದೇಶಗಳಿಂದ ಫೆಬ್ರವರಿಯಿಂದ ಇಲ್ಲಿಯವರೆಗೆ ಯಾವ ದಿನಾಂಕಗಳಂದು
ಸೇಬು ಆಮದು ಮಾಡಿಕೊಳ್ಳಲು ಬುಕ್ಕಿಂಗ್ ಮಾಡಲಾಗಿದೆ ಮತ್ತು ಯಾವ ದಿನಾಂಕಗಳಲ್ಲಿ ಸೇಬನ್ನು ಶೀತಲ ಪೆಟ್ಟಿಗೆಗಳಲ್ಲಿ ಚೆನ್ನೈ ಮುಂಬೈ ಬಂದರುಗಳಲ್ಲಿ ಕಾಯ್ದಿರಿಸಲಾಗಿದೆ, ಯಾವ ದಿನಾಂಕಗಳಂದು ಮಾರುಕಟ್ಟೆ ಪ್ರಾಂಗಣಕ್ಕೆ ಬಂದಿದೆ ಎಂಬ ಬಗ್ಗೆ ಮಾಹಿತಿಯನ್ನು ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಸಲ್ಲಿಸಲು ಮಾರುಕಟ್ಟೆ ಕಾರ್ಯದರ್ಶಿ ಸೂಚಿಸಿದ್ದಾರೆ.