ಮಂಡ್ಯ: ಭ್ರೂಣ ಹತ್ಯೆ ಪೀಡುಗಳನ್ನು ಬೇರು ಸೇಮತ ಕೀಳುವ ಕಾರ್ಯ ಇತ್ತೀಚೆಗೆ ನಡೆಯುತ್ತಿವೆ. ಆದರೂ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಮಂಡ್ಯದಲ್ಲಿ ಕಳೆದ ಕೆಲವು ದಿನಗಳ ಹಿಂದಷ್ಟೇ ಆಲೆಮನೆಯೊಂದರಲ್ಲಿ ಭ್ರೂಣಹತ್ಯೆ (Feticide) ನಡೆದ ಪ್ರಕರಣ ಬೆಳಕಿಗೆ ಬಂದಿದ್ದು, ಭಾರೀ ಸದ್ದು ಮಾಡಿದ್ದವು. ಸದ್ಯ ಅದೇ ರೀತಿ ಪ್ರಕರಣವೊಂದು ಬಯಲಾಗಿದ್ದು, ಭ್ರೂಣಹತ್ಯೆ ನಡೆಯುತ್ತಿದ್ದ ಸಂದರ್ಭದಲ್ಲಿ ಅಧಿಕಾರಿಗಳು ದಾಳಿ ನಡೆಸಿ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಆನಂದ್ ಹಾಗೂ ಅಶ್ವಿನಿ ಎಂದು ಗುರುತಿಸಲಾಗಿದೆ. ಇವರೊಂದಿಗೆ ಮತ್ತೋರ್ವ ಮಹಿಳೆಯನ್ನು ಕೂಡ ಬಂಧಿಸಿದ್ದಾರೆ. ಬಂಧಿತರು ಡಿ ಗ್ರೂಪ್ ನೌಕರರು ಎನ್ನಲಾಗಿದೆ. ಆನಂದ್ ಆಂಬುಲೆನ್ಸ್ ಡ್ರೈವರ್ ಆಗಿದ್ದು, ಅಶ್ವಿನಿ ತಾಲೂಕು ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಡಿ ಗ್ರೂಪ್ ನೌಕರರಾಗಿದ್ದಾರೆ.