ಕುತ್ತಿಗೆಗೆ ಬೆಲ್ಟ್ ನಿಂದ ಬಿಗಿದು ಪ್ರಜ್ಞೆ ತಪ್ಪಿಸಿ ಅತ್ಯಾಚಾರ ನಡೆಸಿರುವ ಕ್ರೂರ ಘಟನೆ ನ್ಯೂಯಾರ್ಕ್ ನಲ್ಲಿ ನಡೆದಿದೆ.
ಪಾಪಿಯೊಬ್ಬ ಮಹಿಳೆಗೆ ಹಿಂದಿನಿಂದ ಬೆಲ್ಟ್ ಬಿಗಿದಿದ್ದಾನೆ. ಈ ಸಂದರ್ಭದಲ್ಲಿ ಮಹಿಳೆ ನೆಲಕ್ಕೆ ಬಿದ್ದಿದ್ದಾರೆ. ಆಕೆಯನ್ನು ಕಾರಿನ ಬಳಿ ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ, ಆರೋಪಿ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದುವರೆಗೂ ಆರೋಪಿ ಯಾರು ಎಂಬುವುದು ಪತ್ತೆಯಾಗಿಲ್ಲ.
ಮುಖಕ್ಕೆ ಬಿಳಿ ಬಟ್ಟೆ ಕಟ್ಟಿಕೊಂಡು ಮಹಿಳೆಯನ್ನು ಸುಮಾರು ದೂರದಿಂದ ಹಿಂಬಾಲಿಸಿಕೊಂಡು ಬಂದು, ದಾಳಿ ಮಾಡಿದ್ದಾನೆ ಎಂದು ಹೇಳಲಾಗಿದೆ. ಕುತ್ತಿಗೆಗೆ ಬೆಲ್ಟ್ ಬಿಗಿದ ಕಾರಣ ಮಹಿಳೆ ಪ್ರಜ್ಞಾ ತಪ್ಪಿದ್ದಾಳೆ. ನಂತರ ಆಕೆಯ ಮೇಲೆ ಮನಬಂದಂತೆ ಅತ್ಯಾಚಾರ ಮಾಡಿದ್ದಾನೆ. ನಂತರ ಆತ ಅಲ್ಲಿಂದ ಪರಾರಿಯಾಗಿದ್ದಾನೆ.