ಮಕರ ಸಂಕ್ರಾಂತಿ ನಮ್ಮ ದೇಶದ ಒಂದು ಪ್ರಮುಖ ಹಬ್ಬವಾಗಿದ್ದು, ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ದಿನವನ್ನು ಸೂಚಿಸುತ್ತದೆ. ಇದು ಚಳಿಗಾಲದ ಅಂತ್ಯವಾಗುವುದನ್ನು ಮತ್ತು ಉತ್ತರಾಯಣ ಎಂಬ ಶುಭ ಕಾಲದ ಪ್ರಾರಂಭವನ್ನು ಸಂಕೇತಿಸುತ್ತದೆ. ಉತ್ತರಾಯಣವು ಭಾರತೀಯ ಸಂಸ್ಕೃತಿಯಲ್ಲಿ ಶ್ರೇಷ್ಠ ಸಮಯವೆಂದು ಪರಿಗಣಿಸಲಾಗಿದೆ. ಉತ್ತರಾಯಣವು ಶುದ್ಧತೆ, ಆಧ್ಯಾತ್ಮಿಕ ಬೆಳವಣಿಗೆಯ ಸಂಕೇತವಾಗಿದೆ. ಈ ಸಮಯದಲ್ಲಿ ಪುಣ್ಯಕ್ಷೇತ್ರಗಳಲ್ಲಿ ಸ್ನಾನ ಮಾಡುವುದು, ಧಾರ್ಮಿಕ ಕಾರ್ಯಗಳನ್ನ ಮಾಡುವುದು ವಿಶೇಷ ಮಹತ್ವ ಹೊಂದಿದೆ.
ಮಕರ ಸಂಕ್ರಾಂತಿ ರೈತರಿಗಾಗಿ ವಿಶೇಷವಾಗಿದ್ದು, ಬೆಳೆ ಕಟಾವಾದ ನಂತರ ಅವರ ಶ್ರಮವನ್ನು ಸಂಭ್ರಮಿಸುವ ಹಬ್ಬವಾಗಿದೆ. ಹೊಸ ಬೆಳೆಗಳಿಂದ ತಯಾರಾಗುವ ಪಾಯಸ, ಎಳ್ಳು-ಬೆಲ್ಲ ಮೊದಲಾದ ಸಿಹಿತಿಂಡಿಗಳು ಈ ಹಬ್ಬದಲ್ಲಿ ಮಹತ್ವವನ್ನು ಪಡೆದಿದೆ
ಎಳ್ಳು-ಬೆಲ್ಲ ಹಂಚುವುದು ಸಂಕ್ರಾಂತಿ ಹಬ್ಬದ ಸಂಪ್ರದಾಯ, ಇದು ಸ್ನೇಹ ಮತ್ತು ಏಕತೆಯ ಸಂಕೇತವಾಗಿದೆ. ಎಳ್ಳು-ಬೆಲ್ಲ ಹಂಚುವುದು ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತನ್ನು ಆಡು ಎಂಬ ಸಂದೇಶ ನೀಡುತ್ತದೆ.
ಮಕರ ಸಂಕ್ರಾಂತಿಯಲ್ಲಿ ಪುಣ್ಯಕ್ಷೇತ್ರಗಳಲ್ಲಿ ಸ್ನಾನ ಮಾಡಿ, ಬಡವರಿಗೆ ದಾನ ಮಾಡುವುದು ಶ್ರೇಷ್ಠವೆಂದು ನಂಬುತ್ತಾರೆ. ಕಪ್ಪು ಬಟ್ಟೆ ಧರಿಸುವುದು ಈ ಹಬ್ಬದ ವಿಶೇಷ ಪರಂಪರೆ, ಇದರಿಂದ ಕೋಪ, ದ್ವೇಷ ಮುಂತಾದ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.
ಸಂಕ್ರಾಂತಿ ಹಬ್ಬವು ಎಲ್ಲರ ಬದುಕಲ್ಲೂ ಸಂತೋಷ, ಶಾಂತಿ ಮತ್ತು ಉತ್ತಮ ಆರೋಗ್ಯ ತರಲಿ ಎಂದು ಸಾಕ್ಷಟಿವಿಯು ಹಾರೈಸುತ್ತದೆ.