ಬೆಂಗಳೂರು: ಪ್ರಜ್ವಲ್ ರೇವಣ್ಣಗೆ ಉರುಳು ಬಿಗಿಯಾಗುತ್ತಿದೆ. ಒಂದರ ಹಿಂದೆ ಒಂದರಂತೆ ಎಫ್ ಐಆರ್ ದಾಖಲಾಗುತ್ತಿದ್ದು, ಕಠಿಣ ಸೆಕ್ಷನ್ ಗಳಡಿ ಪ್ರಕರಣ ದಾಖಲಾಗುತ್ತಿವೆ.
ಮೂರನೇ ಎಫ್ಐಆರ್ ದಾಖಲಾಗಿರುವ ಸೆಕ್ಷನ್ ಪ್ರಜ್ವಲ್ ರೇವಣ್ಣಗೆ ಕಾನೂನು ಕಂಟಕ ಎದುರಾಗಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಮೂರನೇ ಎಫ್ಐಆರ್ನಲ್ಲಿ ಐಪಿಸಿ 376(2)(N), 376(2)(K), 354(A), 354(B), 354(C) ಹಾಗೂ 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿಯೇ ಅವರಿಗೆ ದಿನದಿಂದ ದಿನಕ್ಕೆ ಉರುಳು ಬಿಗಿಯಾಗುತ್ತಿದೆ.
ಈಗಾಗಲೇ ಪ್ರಜ್ವಲ್ ವಿರುದ್ಧ ಮೂರನೇ ಎಪ್ ಐಆರ್ ದಾಖಲಾಗಿದೆ. 376(2)(N)- ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ, 376(2)(K)- 354(A) – ಲೈಂಗಿಕ ಅನುಕೂಲಕ್ಕಾಗಿ ಬೇಡಿಕೆ, 354(B)-ಬಟ್ಟೆ ಹಿಡಿದು ಎಳೆದಾಡಿದ ಆರೋಪ, 354(C) ಖಾಸಗಿ ಚಿತ್ರಗಳನ್ನ ಸೆರೆ ಹಿಡಿದು ವೀಕ್ಷಣೆ ಮಾಡುವುದು, ಆಕೆಯ ಒಪ್ಪಿಗೆ ಇಲ್ಲದೆ ಪ್ರಸಾರ ಮಾಡುವುದು, 506- ಬೆದರಿಕೆ ಹಾಕುವುದು. ಇವು ಕಠಿಣ ಸೆಕ್ಷನ್ ಗಳಾಗಿದ್ದು, ಪ್ರಜ್ವಲ್ ವಿರುದ್ಧ ದಾಖಲಾಗಿವೆ.
ಈಗಾಗಲೇ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಪ್ರಜ್ವಲ್ ಗಾಗಿ ಎಸ್ ಐಟಿ ಜಾಲಾಡುತ್ತಿದೆ.