ಮೈಸೂರು: ಜಾತಿನಿಂದನೆ ಮಾಡಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಟಿ.ನರಸೀಪುರ ತಹಶೀಲ್ದಾರ್ ನಾಗೇಶ್ ಕ್ಷಮೆ ಕೇಳಿದ್ದಾರೆ.
ನನ್ನ ಬಾಯ್ತಪ್ಪಿನಿಂದ ಆಗಿರುವ ಪ್ರಮಾದವನ್ನು ಕ್ಷಮಿಸಬೇಕು. ಪದ ಉಚ್ಛಾರಣೆಯಲ್ಲಿ ಲೋಪವಾಗಿದೆ. ಒಂದು ವೇಳೆ ನನ್ನ ಮಾತಿನಿಂದ ಸಮುದಾಯಕ್ಕೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ನಾಗೇಶ್ ಹೇಳಿದ್ದಾರೆ.
ಬಾಬಾಸಾಹೇಬ್ ಅಂಬೇಡ್ಕರ್ ನೀಡಿರುವ ಸಂವಿಧಾನವೇ ನನ್ನ ವೃತ್ತಿಗೆ ಸ್ಫೂರ್ತಿ. ಪ್ರಜಾಪ್ರಭುತ್ವ ಭಾರತದಲ್ಲಿ ನಾವೆಲ್ಲರೂ ಸಮಾನರು ಎಂಬ ಭಾವನೆ ನನಗಿದೆ. ನಾವೆಲ್ಲರೂ ತಾಲೂಕಿನ ಅಭಿವೃದ್ಧಿಗೆ ಶ್ರಮಿಸೋಣ. ಹೀಗಾಗಿ ಕೆಂಪೇಗೌಡ ದಿನಾಚರಣೆ ವೇಳೆ ನಾನು ಬಾಯಿ ತಪ್ಪಿ ಮಾತನಾಡಿರುವುದಕ್ಕೆ ಕ್ಷಮೆ ಕೋರುತ್ತೇನೆ ಎಂದಿದ್ದಾರೆ.
ತಾಲೂಕು ದಂಡಾಧಿಕಾರಿ ನಾಗೇಶ್ ವಿರುದ್ಧ ದಲಿತ ಸಂಘಟನೆಗಳು ಜಾತಿನಿಂದನೆ ಆರೋಪ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಕ್ಷಮೆ ಕೇಳಿ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಪಾದಚಾರಿಗಳೇ ಬೆಂಗಳೂರಿನ ಬಾಸ್ – ಹೆದರಬೇಡಿ ನಾನು ನಿಮ್ಮ ಬೆನ್ನಿಗಿದ್ದೇನೆ: ಫುಟ್ ಪಾತ್ ತೆರವಿಗೆ ಅಧಿಕಾರಿಗಳಿಗೆ ಅಭಯ ನೀಡಿದ ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು ನಗರದ ಸೌಂದರ್ಯ ಮತ್ತು ಪಾದಚಾರಿಗಳ ಸುರಕ್ಷತೆಗೆ ಅಡ್ಡಿಯಾಗಿರುವ ಫುಟ್ ಪಾತ್ ಒತ್ತುವರಿ ತೆರವುಗೊಳಿಸಲು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಈಗ ಯುದ್ಧೋಪಾದಿಯಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರತಿದಿನ...








