ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಅಮೂಲ್ಯ ವಿಶ್ವಮಾನವ ತತ್ವ ಇಟ್ಟುಕೊಂಡಿದ್ದಾಳೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅಮೂಲ್ಯ ಪರ ಬ್ಯಾಟ್ ಮಾಡಿದ್ದಾರೆ.
ಬೆಂಗಳೂರಿನ ಫ್ರೀಡಂ ಉದ್ಯಾನದಲ್ಲಿ ಸಿಎಎ ವಿರೋಧಿಸಿ ನಡೆದಿದ್ದ ಕಾರ್ಯಕ್ರಮದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಅಮೂಲ್ಯ ಲಿಯೋನಾ ದೇಶದ ಜನ ಕೆಂಗಣ್ಣಿಗೆ ಗುರಿಯಾಗಿದ್ದಳು. ಈ ಕುರಿತು ಮಾತನಾಡಿರುವ ಡಿಕೆ ಶಿವಕುಮಾರ್, ಅಮೂಲ್ಯಳ ಹಳೆಯ ವಿಡಿಯೋಗಳನ್ನು ನೋಡಿದ್ದೇನೆ. ಅವಳದ್ದೆ ಆದ ತತ್ವವನ್ನು ಆಕೆ ಹೊಂದಿದ್ದಾಳೆ. ಆ ಹೆಣ್ಣು ಮಗಳು ಏನೋ ಹೇಳುವುದಕ್ಕೆ ಹೊರಟ್ಟಿದ್ದಳೋ ಅವಳನ್ನು ತಡೆದಿದ್ದಾರೆ, ಅಕೆಯ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇದು ದೇಶದ ವಿಚಾರ. ನಮ್ಮ ದೇಶವನ್ನು ಅಗೌರವದಿಂದ ಕಾಣುವುದು. ಬೇರೆ ದೇಶದ ಪರವಾಗಿ ನಿಂತುಕೊಳ್ಳುವಂತದ್ದಲ್ಲ. ಯಾರು ಅದಕ್ಕೆ ಪ್ರೋತ್ಸಾಹ ಕೊಡಬಾರದು. ಹಾಗೇ ಕೆಲ ವಿಚಾರಗಳ ಪರವಾಗಿ ಧ್ವನಿ ಎತ್ತುವುದನ್ನು ಮೊಟಕುಗೊಳಿಸಲೂಬಾರದು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.