ಹಾಸನ : ಹೆಚ್.ಡಿ ರೇವಣ್ಣ ಅವರ ಬೆಂಗಾವಲು ಪಡೆಯ ಸಿಬ್ಬಂದಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ ರೇವಣ್ಣ ಅವರು ಕೊರೊನಾ ಟೆಸ್ಟ್ ಮಾಡಿಸಿದ್ದರು. ಇದೀಗ ಆ ವರದಿ ಬಂದಿದ್ದು, ಈ ಬಗ್ಗೆ ಹೆಚ್.ಡಿ ರೇವಣ್ಣ ಮಾಹಿತಿ ನೀಡಿದ್ದು, ನನ್ನ ಕೊರೊನಾ ಪರೀಕ್ಷೆ ವರದಿ ನೆಗೆಟಿವ್ ಬಂದಿದೆ ಎಂದು ತಿಳಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿರುವ ಅವರು, ನಾನು ಕೊರೊನಾ ಟೆಸ್ಟ್ ಮಾಡಿಸಿದ್ದೇನೆ. ನನ್ನ ವರದಿ ನೆಗಟಿವ್ ಬಂದಿದೆ. ನಾನು ಕೊರೊನಾ ಟೆಸ್ಟ್ ಮಾಡಿಸಿ ರಿಸಲ್ಟ್ ಬರುವವರೆಗೂ ಯಾರನ್ನು ಭೇಟಿ ಮಾಡಬಾರದು ಎಂದು ಸುಮ್ಮನಿದ್ದೆ. ನನ್ನ ಬೆಂಗಾವಲು ಪಡೆಯ ಸಿಬ್ಬಂದಿ ನನ್ನ ಜೊತೆ ಸಂಪರ್ಕದಲ್ಲಿ ಇಲ್ಲ. ನಮ್ಮ ಮನೆಯಲ್ಲಿ ಯಾರೂ ಹೋಂ ಕ್ವಾರಂಟೈನ್ ಆಗಿಲ್ಲ. ನನ್ನ ಪಿಎಗಳಿಗೂ ರಜೆ ನೀಡಿ ಕಳುಹಿಸಿದ್ದೇನೆ. ಬೆಂಗಾವಲು ಪಡೆಯ ನಾಲ್ವರಿಗೆ ಕೊರೊನಾ ಪಾಸಿಟಿವ್ ಬಂದ ತಕ್ಷಣ ನಾನು ಕೊರೊನಾ ಪರೀಕ್ಷೆ ಮಾಡಿಸಿದ್ದೇನೆ. ಇದಕ್ಕಾಗಿಯೇ ನಿನ್ನೆ ಮಾಡಬೇಕಿದ್ದ ತಾಲೂಕು ಪಂಚಾಯ್ತಿ ಸಭೆಯನ್ನು ಕೂಡ ಕ್ಯಾನ್ಸಲ್ ಮಾಡಿಸಿದ್ದೆ ಎಂದು ಹೇಳಿದ್ದಾರೆ.
ಇನ್ನು ಕಳೆದ ಸೋಮವಾರ ರೇವಣ್ಣ ಅವರು ಗನ್ ಮ್ಯಾನ್ ಗಳು ಸೇರಿದಂತೆ ಅವರ 9 ಜನ ಸಿಬ್ಬಂದಿಗೆ ಕೊರೊನಾ ತಪಾಸಣೆ ಮಾಡಲಾಗಿತ್ತು. ಮಂಗಳವಾರ ಬಂದ ವರದಿಯಲ್ಲಿ ರೇವಣ್ಣ ಅವರ ನಾಲ್ವರು ಗನ್ ಮ್ಯಾನ್ ಗಳಿಗೂ ಕೊರೊನಾ ಪಾಸಿಟಿವ್ ಬಂದಿತ್ತು.








