ಮುಂಬೈ: ಬಾಲಿವುಡ್ ಧೋನಿ ಎಂದೇ ಖ್ಯಾತರಾಗಿದ್ದ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ತನಿಖೆ ಸ್ಫೋಟಕ ತಿರುವು ಪಡೆಯುತ್ತಿದೆ. ಸುಶಾಂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‍ನ ಸ್ಟಾರ್ ಡೈರೆಕ್ಟರ್ ಸಂಜಯ್ ಲೀಲಾ ಬನ್ಸಾಲಿಗೆ ಸಂಕಷ್ಟ ಎದುರಾಗಿದೆ.
ಸಂಜಯ್ ಲೀಲಾ ಬನ್ಸಾಲಿಗೆ ಸಮನ್ಸ್ ನೀಡಲು ಮುಂಬೈನ ಬಾಂದ್ರಾ ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಕೆಲವೇ ದಿನಗಳಲ್ಲಿ ಸಂಜಯ್ ಲೀಲಾ ಬನ್ಸಾಲಿಗೆ ಪೊಲೀಸರ ಸಮನ್ಸ್ ಬರುವ ಸಾಧ್ಯತೆ ಇದ್ದು, ಪೊಲೀಸರ ವಿಚಾರಣೆಗೆ ಹಾಜರಾಗುವ ಸ್ಥಿತಿ ಎದುರಾಗಿದೆ ಎನ್ನಲಾಗಿದೆ.
ಜೂನ್ 28ರಂದು ಯಶ್ ರಾಜ್ ಫಿಲ್ಮ್ ಬ್ಯಾನರ್‍ನಲ್ಲಿ ಕಲಾ ನಿರ್ದೇಶಕರಾಗಿರುವ ಶಾನೂ ಶರ್ಮಾ ಅವರನ್ನು ಬಾಂದ್ರಾ ಪೊಲೀಸರು ಒಂದು ಹಂತದ ವಿಚಾರಣೆ ಮಾಡಿದ್ದಾರೆ. ಸದ್ಯದಲ್ಲಿಯೇ ಶಾನೂ ಶರ್ಮಾ ಅವರನ್ನು ಎರಡನೇ ಸುತ್ತಿನ ವಿಚಾರಣೆಗೆ ಬಾಂದ್ರಾ ಪೊಲೀಸರು ಕರೆಯುವ ಸಾಧ್ಯತೆ ಇದೆ. ಈಕೆ ಕೂಡ ಸುಶಾಂತ್ ರಜಪೂತ್ ಜತೆ ಕೆಲಸ ಮಾಡಿದ್ದಳು.
ಪೊಲೀಸರ ವಿಚಾರಣೆಗೆ ಹಾಜರಾಗಬೇಕಿರುವ ಬಾಲಿವುಡ್‍ನ ದೊಡ್ಡ ಸ್ಟಾರ್‍ಗಳ ಪಟ್ಟಿಯನ್ನು ಬಾಂದ್ರಾ ಪೊಲೀಸರು ಸಿದ್ದಪಡಿಸುತ್ತಿದ್ದಾರೆ. ನಟಿ ಕಂಗನಾ ರಣಾವತ್ ಹಾಗೂ ನಿರ್ಮಾಪಕ ಶೇಖರ್ ಕಪೂರ್ ಅವರನ್ನು ಕೂಡ ಹೇಳಿಕೆ ಪಡೆಯಲು ಪೊಲೀಸರು ಕರೆಸುವ ಸಾಧ್ಯತೆ ಇದೆ ಎಂಬ ಸುದ್ದಿ ಬಾಲಿವುಡ್‍ನಲ್ಲಿ ಹರಿದಾಡುತ್ತಿದೆ.
ಸುಶಾಂತ್ ಸಿಂಗ್ ರಜಪೂತ್ ಅವರು ತಮ್ಮ `ಪಾನಿ’ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಶೇಖರ್ ಕಪೂರ್ ಕೆಲ ವರ್ಷಗಳ ಹಿಂದೆ ತಿಳಿಸಿದ್ದರು. ಆದರೆ, ಆ ಪ್ರಾಜೆಕ್ಟ್‍ನನ್ನು ಶೇಖರ್ ಕೈಬಿಟ್ಟಿದ್ದರು.
‘ಆಸ್ಟ್ರಲ್ ಪೇಜೆಂಟ್ಸ್’ 10ನೇ ಆವೃತ್ತಿ ಯಶಸ್ವಿ: ಮಹಿಳಾ ಸಬಲೀಕರಣದ ಆಶಯದ ಸ್ಪರ್ಧೆಗೆ ದಶಕದ ಸಂಭ್ರಮ
ಬೆಂಗಳೂರು : ಕಳೆದ ಒಂಬತ್ತು ವರ್ಷಗಳಿಂದ ವೈಶಿಷ್ಟ್ಯಪೂರ್ಣವಾಗಿ ಹಾಗೂ ಅದ್ಧೂರಿಯಾಗಿ ಆಯೋಜನೆಗೊಳ್ಳುತ್ತಾ ಬರುತ್ತಿರುವ ಆಸ್ಟ್ರಲ್ ಪೇಜೆಂಟ್ಸ್ ತನ್ನ 10ನೇ ಎಡಿಷನ್ನ್ನು ಅದ್ದೂರಿಯಾಗಿ ಪೂರ್ಣಗೊಳಿಸಿತು. ನಗರದ ಕಿಂಗ್ಸ್ ಮೆಡೋಸ್‌ನಲ್ಲಿ...








