ದಕ್ಷಿಣ ಕನ್ನಡ: ವ್ಯಕ್ತಿಯೊಬ್ಬ ಕೊಟ್ಟ ಸಾಲ ಕೇಳಿದ್ದಕ್ಕೆ ಮಹಿಳೆಯ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆ(Ujire)ಯಲ್ಲಿ ನಡೆದಿದೆ. ಧರ್ಮಸ್ಥಳದ ರೂಪಾ ಎಂಬ ಮಹಿಳೆ, ನವೀನ್ ಕನ್ಯಾಡಿ ಎಂಬಾತನಿಗೆ 7 ಲಕ್ಷ ರೂ ಸಾಲ ನೀಡಿದ್ದರು. ಆದರೆ, ಆತ ಹಣವನ್ನು ಮರಳಿ ನೀಡಿಲ್ಲ. ಹೀಗಾಗಿ ರೂಪ ಮರಳಿ ಕೊಡುವಂತೆ ಕೇಳಿದ್ದಾಳೆ.
ಆದರೆ, ಇದಕ್ಕೆ ಕೋಪಗೊಂಡ ಬಿಜೆಪಿ ಕಾರ್ಯಕರ್ತ ಹಾಗೂ ಹೂವಿನ ವ್ಯಾಪಾರಿ ನವೀನ್ ಹಲ್ಲೆ ಮಾಡಿದ್ದಾನೆ. ಗಾಯಗೊಂಡಿರುವ ರೂಪ ಸದ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನವೀನ್ ಕನ್ಯಾಡಿ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವ್ಯಕ್ತಿ ಈ ಹಿಂದೆ ಕೂಡ ಹಲವರ ಮೇಲೆ ಹಲ್ಲೆ ಮಾಡಿದ್ದ ಎನ್ನಲಾಗಿದೆ.