ಚೆನ್ನೈ: ಭಾರತ ಹಾಗೂ ದಕ್ಷಿಣ ಆಫ್ರಿಕಾ ವನಿತೆಯರ ವಿರುದ್ದ ನಡೆಯುತ್ತಿರುವ ಏಕೈಕ ಟೆಸ್ಟ್ ನಲ್ಲಿ ಭಾರತ ಮೇಲುಗೈ ಸಾಧಿಸುತ್ತಿದೆ. ಭಾರತವು ಬಿಗಿ ಬೌಲಿಂಗ್ ನಿಂದಾಗಿ ಪಂದ್ಯದಲ್ಲಿ ಮೇಲೆ ಹಿಡಿತ ಸಾಧಿಸಿದೆ.
ಸ್ಪಿನ್ನರ್ ಸ್ನೇಹ್ ರಾಣಾ ಬೌಲಿಂಗ್ ದಾಳಿಗೆ ಬೆಚ್ಚಿದ ದಕ್ಷಿಣ ಆಫ್ರಿಕಾ ತಂಡ ದಿಢೀರ್ ನಾಟಕೀಯ ಕುಸಿತ ಕಂಡಿದೆ. ದಕ್ಷಿಣ ಆಫ್ರಿಕಾ ತಂಡ ಎರಡನೇ ದಿನದಾಟದ ಅಂತ್ಯಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡು 236 ರನ್ ಗಳಿಸಿತ್ತು. ಆದರೆ, ಭಾನುವಾರ ಕೇವಲ 30 ರನ್ ಗಳಿಸಿ ಸರ್ವ ಪತನ ಕಂಡಿದೆ.
ಭಾರತದ ಪರ ಭರ್ಜರಿ ದಾಳಿ ನಡೆಸಿದ ಸ್ನೇಹ್ ರಾಣಾ ಎಂಟು ವಿಕೆಟ್ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾ ಫಾಲೋ ಆನ್ ಗೆ ಒಳಗಾಗಿದೆ. 69 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಮರಿಜಾನೆ ಕಪ್ಪ್ ಇಂದು 74 ರನ್ ಗಳಿಸಿದ್ದ ವೇಳೆ ವಿಕೆಟ್ ಒಪ್ಪಿಸಿದರು. ಕ್ಲರ್ಕ್ 39 ರನ್ ಗಳಿಸಿದರು. ಆದರೆ, ಭಾನುವಾರ ಯಾವೊಬ್ಬ ಆಟಗಾರರು ಕ್ರೀಸ್ ನಲ್ಲಿ ನಿಲ್ಲುವ ಪ್ರಯತ್ನ ಮಾಡಲಿಲ್ಲ. ಪರಿಣಾಮವಾಗಿ ದ.ಆಫ್ರಿಕಾ ತಂಡವು 266 ರನ್ ಗಳಿಗೆ ಆಲೌಟಾಯಿತು.
ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಗೆ 603 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ದಕ್ಷಿಣ ಆಫ್ರಿಕಾ 266 ರನ್ ಗೆ ಆಲೌಟಾಗಿ 337 ರನ್ ಹಿನ್ನಡೆ ಅನುಭವಿಸಿದೆ. ಭಾರತವು ಫಾಲೋ ಆನ್ ಹೇರಿದೆ. ಈಗ ದಕ್ಷಿಣ ಆಫ್ರಿಕಾ ತಂಡ 105 ರನ್ ಗಳ ಹಿನ್ನಡೆ ಅನುಭವಿಸಿದೆ.