ಹಾಸನ: ಮದುವೆಗೆ ಬಂದಿದ್ದ ಜನರ ಮೇಲೆ ಕೋತಿ ದಾಳಿ ನಡೆಸಿರುವ ಘಟನೆ ನಡೆದಿದೆ.
ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಿರಿಸಾವೆಯ ನುಗ್ಗೆಹಳ್ಳ ರಸ್ತೆಯಲ್ಲಿನ ಕಲ್ಯಾಣ ಮಂಟಪದಲ್ಲಿ ಮದುವೆ (Marriage) ಸಮಾರಂಭ ನಡೆದಿತ್ತು. ಈ ವೇಳೆ ಮದುವೆ ಮನೆಗೆ ಕೋತಿಯೊಂದು ನುಗ್ಗಿ ರಂಪಾಟ ಮಾಡಿದೆ. ಕೋತಿ ವರನ ಪಕ್ಕ ಕುಳಿತು ಮದುವೆಗೆ ಅಡ್ಡಿಪಡಿಸಿದೆ. ಅಲ್ಲದೆ, ಊಟದ ಹಾಲ್ ಗೆ ತೆರಳಿ ಊಟ ಮಾಡುತ್ತಿದ್ದವರಿಗೆ ತೊಂದರೆ ಕೊಟ್ಟಿದೆ. ಮದುವೆಗೆ ಬಂದಿದ್ದ 8 ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ.
ಘಟನೆಯಲ್ಲಿ ಸುಶೀಲಮ್ಮ, ಲೀಲಾವತಿ, ನಿಂಗೇಗೌಡ, ಗೌರಮ್ಮ, ಗಿರಿಜಮ್ಮ, ತಿಮ್ಮೇಗೌಡ, ಗಿರಿಗೌಡ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮದುವೆ ಮನೆಯಲ್ಲಿ ಮಂಗನಾಟಕ್ಕೆ ಜನರು ರೋಸಿ ಹೋಗಿದ್ದರು. ಈ ಕೋತಿ ಗ್ರಾಮದಲ್ಲಿನ ಹಲವರ ಮೇಲೆ ಕೂಡ ದಾಳಿ ನಡೆಸುತ್ತಿತ್ತು ಎನ್ನಲಾಗಿದೆ. ಈಗ ಮದುವೆ ಮನೆಗೆ ನುಗ್ಗಿ ರಂಪಾಟ ಮಾಡಿದೆ. ಹೀಗಾಗಿ ಕೋತಿಯನ್ನು ಹಿಡಿದು ಸ್ಥಳಾಂತರ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.