ಮ್ಯಾಚ್ ಫಿಕ್ಸಿಂಗ್ ಆರೋಪ – ಸಂಗಕ್ಕರ ಮತ್ತು ಜಯವರ್ಧನೆಗೆ ಸಮನ್ಸ್
2011ರ ವಿಶ್ವಕಪ್ ಫೈನಲ್ ಪಂದ್ಯದ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿದೆ. ಶ್ರೀಲಂಕಾದ ಕ್ರೀಡಾ ಸಚಿವ ಮಾಡಿರುವ ಆರೋಪದಡಿಯಲ್ಲಿ ಇದೀಗ ಶ್ರೀಲಂಕಾ ಇಬ್ಬರು ಮಹಾನ್ ಕ್ರಿಕೆಟಿಗರು ತನಿಖಾ ತಂಡದ ಎದುರು ಹಾಜರಾಗಬೇಕಿದೆ.
ಶ್ರೀಲಂಕಾದ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಆಲುತ್‍ಗಾಮೇಜ್ ಅವರು 2011ರ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಫಿಕ್ಸಿಂಗ್ ಆಗಿತ್ತು ಎಂದು ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಲಂಕಾ ಕ್ರೀಡಾ ಸಚಿವವರು ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸುವಂತೆ ಆದೇಶ ಮಾಡಿದ್ದರು. ಈಗಾಗಲೇ 2011ರ ವಿಶ್ವಕಪ್ ಟೂರ್ನಿಯ ವೇಳೆ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದ ಅರವಿಂದ ಡಿಸಿಲ್ವಾ ಅವರನ್ನು ತನಿಖೆಗೆ ಒಳಪಡಿಸಲಾಗಿತ್ತು.
ಇದೀಗ 2011ರ ವಿಶ್ವಕಪ್ ವೇಳೆ ಶ್ರೀಲಂಕಾ ತಂಡದ ನಾಯಕನಾಗಿದ್ದ ಕುಮಾರ ಸಂಗಕ್ಕರ ಮತ್ತು ತಂಡದ ಸ್ಟಾರ್ ಆಟಗಾರ ಮಹೇಲಾ ಜಯವರ್ಧನೆ ಅವರಿಗೂ ತನಿಖೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ.