ಮ್ಯಾನ್ಮಾರ್‌ನಲ್ಲಿ ಭೂಕುಸಿತದಿಂದ 100ಕ್ಕೂ ಹೆಚ್ಚು ಸಾವು
ಬ್ಯಾಂಕಾಕ್, ಜುಲೈ 3: ಮಾನ್ಸೂನ್ ಮಳೆಯಿಂದ ಮ್ಯಾನ್ಮಾರ್ ನಲ್ಲಿ ಉಂಟಾದ ಭೂಕುಸಿತದಿಂದ ಕನಿಷ್ಠ 113 ಜನರು ಸಾವನ್ನಪ್ಪಿದ್ದಾರೆ ಎಂದು ಮ್ಯಾನ್ಮಾರ್ ಅಗ್ನಿಶಾಮಕ ಇಲಾಖೆ ವಿಭಾಗವು ಗುರುವಾರ ತಿಳಿಸಿವೆ.
ಕಾಚಿನ್ ರಾಜ್ಯದಲ್ಲಿರುವ ಹಪಕಾಂತ್ ಟೌನ್‌ಶಿಪ್ ಬಳಿಯ ಜೆಡ್ ಮೇನ್ ಬಳಿ ಸ್ಥಳೀಯ ಸಮಯ ಬೆಳಿಗ್ಗೆ 8 ಗಂಟೆಗೆ ಭೂಕುಸಿತ ಸಂಭವಿಸಿದೆ. ಗಣಿಗಾರಿಕೆ ನಡೆಯುತ್ತಿರುವ ಪ್ರದೇಶದಲ್ಲಿ ಭೂ ಕುಸಿತವಾಗಿರುವ ಹಿನ್ನಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ಸಾವುನೋವುಗಳು ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.
ಉತ್ತರ ಮ್ಯಾನ್ಮಾರ್ ನಲ್ಲಿ ಉಂಟಾಗಿರುವ ಈ ಭೂಕುಸಿತದಲ್ಲಿ ಕನಿಷ್ಠ 130 ಮ್ಯಾನ್ಮಾರ್ ಗಣಿಗಾರರ ಶವಗಳನ್ನು ಅವಶೇಷಗಳಡಿಯಿಂದ ಹೊರತೆಗೆಯಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಸುದ್ದಿ ಸಂಸ್ಥೆಯೊಂದು, ಚೀನಾ ಗಡಿ ಭಾಗದ ಬಳಿಯಿರುವ ಕಚಿನ್ ರಾಜ್ಯದಲ್ಲಿ ಭಾರಿ ಮಳೆಯ ಹಿನ್ನಲೆಯಲ್ಲಿ ಭೂಕುಸಿತ ಉಂಟಾಗಿದೆ. ಕಚಿನ್ ರಾಜ್ಯದಲ್ಲಿ ಇರುವ ಹಾಪಕಾಂತ ಕ್ಷೇತ್ರದಲ್ಲಿ ಕಾರ್ಮಿಕರು ಕಲ್ಲು ಸಂಗ್ರಹಿಸುವಲ್ಲಿ ತೊಡಗಿದ್ದಾಗ ಅಲ್ಲಿನ ಒಂದು ಗಣಿ ಕುಸಿದು ಬಿದ್ದಿದ್ದು ಭೂಕುಸಿತ ಉಂಟಾಗಿದೆ. ಇದುವರೆಗೆ ಸುಮಾರು 113 ಶವಗಳನ್ನು ಹೊರತೆಗೆಯಲಾಗಿದ್ದು ಈ ಅವಘಡದಲ್ಲಿ ಇನ್ನೂ ಅನೇಕರು ಮೃತಪಟ್ಟಿದ್ದಾರೆ ಎಂದು ಹೇಳಿದೆ.
ರಕ್ಷಣಾ ತಂಡದ ಸದಸ್ಯರು ಈ ಘಟನೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದು, ಆ ಪ್ರದೇಶದಲ್ಲಿ ಭಾರಿ ಮಳೆಯಾದ ಹಿನ್ನಲೆಯಲ್ಲಿ ಮಣ್ಣಿನ ಕೆಸರಿನ ಒಂದು ದೊಡ್ಡ ಪ್ರಮಾಣದ ಅಲೆಯೇ ಸೃಷ್ಟಿಯಾಗಿ, ಕೆಳಗೆ ಕಲ್ಲು ಸಂಗ್ರಹಣೆಯಲ್ಲಿ ತೊಡಗಿದ್ದ ಕಾರ್ಮಿಕರ ಮೇಲೆ ಕುಸಿದು ಬಿದ್ದಿದೆ. ಇದರಿಂದಾಗಿ 100 ಕ್ಕೂ ಹೆಚ್ಚು ಜನರು ಕೆಸರಿನ ಅಡಿಯಲ್ಲಿ ಸಿಲುಕಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು.
ಮ್ಯಾನ್ಮಾರ್ ಅಗ್ನಿಶಾಮಕ ಇಲಾಖೆ ವಿಭಾಗವು ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದು, ಹಪಕಾಂತ್‌ನಲ್ಲಿನ ಭೂಕುಸಿತದ ಇತ್ತೀಚಿನ ಮಾಹಿತಿಯ ಪ್ರಕಾರ,113 ಮಂದಿ ಮೃತಪಟ್ಟಿದ್ದಾರೆ ಮತ್ತು ರಕ್ಷಣಾ ಕಾರ್ಯಗಳು ಮುಂದುವರೆದಿದೆ ಎಂದು ಮಾಹಿತಿ ನೀಡಿದೆ.