ಲಖನೌ : ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದ ತಾಯಿ-ಮಗಳ ಮುಂದೆಯೇ ಪೊಲೀಸ್ ಅಧಿಕಾರಿ ಹಸ್ತಮೈಥುನ ಮಾಡಿಕೊಂಡ ನೀಚ ಘಟನೆ ಲಖನೌನ ದಿಯೋರಿಯಾದಲ್ಲಿ ನಡೆದಿದೆ. ಸದ್ಯ ಈ ಪೊಲೀಸ್ ಅಧಿಕಾರಿರನ್ನು ಬಂಧಿಸಲಾಗಿದ್ದು, ಆರೋಪಿಯನ್ನು ಅಮಾನತು ಮಾಡಲಾಗಿದೆ. ದಿಯೋರಿಯಾ ಠಾಣೆಯ ಭೀಷ್ಮ ಪಾಲ್ ಸಿಂಗ್ ಅಮಾನತುಗೊಂಡಿರುವ ಇನ್ ಸ್ಪೆಕ್ಟರ್.
ಜಮೀನು ವಿಚಾರವಾಗಿ ದೂರು ನೀಡಲು ಮಹಿಳೆ ಒಬ್ಬರು ತನ್ನ ಪುತ್ರಿ ಜೊತೆ ಠಾಣೆಗೆ ಆಗಮಿಸಿದ್ದರು. ಡ್ಯೂಟಿಯಲ್ಲಿದ್ದ ಭೀಷ್ಮ ಪಾಲ್ ಅವರ ಮುಂದೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಈ ಎಲ್ಲ ದೃಶ್ಯಗಳನ್ನು ಮಹಿಳೆಯ ಪುತ್ರಿ ತನ್ನ ಮೊಬೈಲಿನಲ್ಲಿ ಸೆರೆ ಹಿಡಿದುಕೊಂಡು ವೈರಲ್ ಮಾಡಿ ನ್ಯಾಯ ಕೇಳಿದ್ದಾರೆ. ಮಂಗಳವಾರ ಸ್ಥಳೀಯ ಮಟ್ಟದಲ್ಲಿ ವಿಡಿಯೋ ವೈರಲ್ ಆಗ್ತಿದ್ದಂತೆ ಇನ್ ಸ್ಪೆಕ್ಟರ್ ನಾಪತ್ತೆಯಾಗಿದ್ದನು.
ಭೀಷ್ಮ ಪಾಲ್ ಎಸ್ಕೇಪ್ ಆಗುತ್ತಿದ್ದಂತೆ ಆತನ ಸುಳಿವು ನೀಡಿದ್ರೆ 25 ಸಾವಿರ ಬಹುಮಾನ ನೀಡಲಾಗುವುದು ಎಂದು ಪೊಲೀಸ್ ಇಲಾಖೆ ಜಾಹಿರಾತು ಸಹ ನೀಡಿತ್ತು. ಬುಧವಾರ ಆತನನ್ನು ಬಂಧಿಸಲಾಗಿದ್ದು, ಎಫ್ ಐಆರ್ ಸಹ ದಾಖಲಾಗಿದೆ ಎಂದು ಎಸ್.ಪಿ. ಶ್ರೀಪತಿ ಮಿಶ್ರಾ ಹೇಳಿದ್ದಾರೆ.








