ಚಿತ್ರದುರ್ಗ: ಶ್ರೀಗಳು ಕಂಡರೆ ಬುದ್ಧಿ ಅಂತೀವಿ. ಆದರೆ, ತಳಸಮುದಾಯವರು ಬುದ್ಧಿವಂತರಾದರು ಏಕವಚನದಲ್ಲಿ ಮಾತನಾಡುತ್ತೇವೆ. ಅದಕ್ಕಾಗಿಯೇ ಶಿಕ್ಷಣ ಪಡೆಯಬೇಕು, ಸ್ವಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಸಲಹೆ ನೀಡಿದ್ದಾರೆ.
ಭೋವಿ ಗುರುಪೀಠದ (Bhovi Gurpeeth) ಆವರಣದಲ್ಲಿ ನಡೆದ ಇಮ್ಮಡಿ ಸಿದ್ದರಾಮೇಶ್ವರ ಶ್ರೀ ಧೀಕ್ಷಾ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭೋವಿ ಗುರುಪೀಠದ ಸಿದ್ದರಾಮೇಶ್ವರ ಶ್ರೀಗಳು ಸದಾ ಭೋವಿ ಸಮಾಜಕ್ಕೆ ಮಾರ್ಗದರ್ಶಕರಾಗಿರಲಿ. ಅವರ ಮಾರ್ಗದರ್ಶನ ಹೀಗೆ ಮುಂದುವರೆಯಲಿ ಎಂದು ಹೇಳಿದ್ದಾರೆ.
ಶೋಷಿತ, ಹಿಂದುಳಿದ ಸಮಾಜಕ್ಕೆ ಮಾರ್ಗದರ್ಶನ ಮಾಡುವವರು ಇರಬೇಕು. ಬಸವಾದಿ ಶರಣರು, ಅಂಬೇಡ್ಕರ್ ಹೇಳಿದಂತೆ ಸಮಸಮಾಜ ನಿರ್ಮಾಣ ಆಗಬೇಕು. ಅವಕಾಶದಿಂದ ವಂಚಿತ ಜನರು ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದ್ದಾರೆ.
ಮೇಲು, ಕೀಳು, ಬಡವ, ಬಲ್ಲಿದ, ಅಕ್ಷರಸ್ಥ, ಅನಕ್ಷರಸ್ಥ ತಾರತಮ್ಯ ಇರಬಾರದು. ಅಸಮಾನತೆ ನಿರ್ಮೂಲನೆ ಆದರೆ ಮಾತ್ರ ಸಮಸಮಾಜ ನಿರ್ಮಾಣ ಆಗಲಿದೆ. ಯಾರೋ ಸ್ವಾರ್ಥಿಗಳು, ಪಟ್ಟಬದ್ರ ಹಿತಾಸಕ್ತಿಗಳು ಜಾತಿ ಅಸಮಾನತೆ ನಿರ್ಮಾಣ ಮಾಡಿದ್ದಾರೆ. ಜಾತಿ ವ್ಯವಸ್ಥೆ ಪರಿಣಾಮವಾಗಿ ನಾವೆಲ್ಲ ಅವಕಾಶದಿಂದ ವಂಚಿತರಾಗಿದ್ದೇವೆ ಎಂದು ಹೇಳಿದ್ದಾರೆ.








