ಬೆಂಗಳೂರು: ಅಸಹಜ ಲೈಂಗಿಕ ಪ್ರಕರಣದ ಆರೋಪದಡಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ವಿಧಾನ ಪರಿಷತ್ (Vidhan Parishad) ಸದಸ್ಯ ಸೂರಜ್ ರೇವಣ್ಣಗೆ (Suraj Revanna) ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾತ್ರ ಷರತ್ತುಬದ್ಧ ಜಾಮೀನು (Bail) ಮಂಜೂರು ಮಾಡಿದೆ. ಸೂರಜ್ ರೇವಣ್ಣರನ್ನು ಜೂನ್ 23 ರಂದು ಬಂಧಿಸಲಾಗಿತ್ತು. ಸೂರಜ್ ಗೆ ಜಾಮೀನು ಸಿಕ್ಕಿದ್ದು, ಪ್ರಜ್ವಲ್ ಗೆ ಮಾತ್ರ ಜಾಮೀನು ಸಿಕ್ಕಿಲ್ಲ. ಹೀಗಾಗಿ ಪ್ರಜ್ವಲ್ ಪರಪ್ಪನ ಅಗ್ರಹಾರದಲ್ಲಿಯೇ ಉಳಿಯಬೇಕಾಗಿದೆ.








