ಕಾರವಾರ: ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ದುರ್ಘಟನೆಯಲ್ಲಿ ನಾಪತ್ತೆಯಾಗಿದ್ದ ಲಾರಿ ಪತ್ತೆಯಾಗಿದೆ ಎನ್ನಲಾಗಿದೆ.
ಪೋಕ್ಲೈನ್‌ನಲ್ಲಿ ಕಾರ್ಯಾಚರಣೆ ಮಾಡುತ್ತಿದ್ದ ಸಂದರ್ಭದಲ್ಲಿ ಲಾರಿ ಪತ್ತೆಯಾಗಿದೆ. ಪತ್ತೆಯಾದ ಭಾರತ್ ಬೆಂಜ್ ಲಾರಿ ಕೇರಳ ಮೂಲದ್ದು ಎನ್ನಲಾಗಿದೆ. ಭಾರತ್ ಬೆಂಜ್ ಲಾರಿ ಚಾಲಕ ಕೇರಳ ಮೂಲದ ಅರ್ಜುನ್ ಎಂಬ ಚಾಲಕ ಸಹ ನಾಪತ್ತೆಯಾಗಿದ್ದ. ಆದರೆ, ಸದ್ಯ ಪತ್ತೆಯಾದ ಭಾರತ್ ಬೆಂಜ್ ಲಾರಿ ಅರ್ಜುನ ಇದ್ದ ಲಾರಿನಾ? ಎಂಬುವುದರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.
ಗುಡ್ಡ ಕುಸಿತದ ಸ್ಥಳದಲ್ಲಿ ಲಾರಿ ಇನ್ನೂ ಪತ್ತೆಯಾಗಿಲ್ಲ. ಗಂಗಾವಳಿ ನದಿಯಲ್ಲಿ ಬಿದ್ದಿದ್ದ ಲಾರಿ ಪತ್ತೆಯಾಗಿದೆ. ಕಾರ್ಯಾಚರಣೆ ಸಂದರ್ಭದಲ್ಲಿ ಕಬ್ಬಿಣ ತಾಗಿದ ಅನುಭವವಾಗಿದೆ. ಈ ಹಿನ್ನಲೆಯಲ್ಲಿ ಲಾರಿ ಇರಬಹುದು ಎಂದು ಶಂಕಿಸಲಾಗಿದೆ.








